ದುರಂತ ನಡೆದಾಗ ಅಲ್ಲೇ ಇದ್ದೆ, ತಕ್ಷಣ ನನಗೂ ಓಡಲು ಆಗಲಿಲ್ಲ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಅಜಯ್ ರಾವ್​

love u racchu ajay rao
Published on

ಬೆಂಗಳೂರು: ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ ಸಂಭವಿಸಿದಾಗ ನಟ ಅಜಯ್​ ರಾವ್​ ಕೂಡ ಅಲ್ಲೇ ಇದ್ದರು. ಆ ಘಟನೆ ಕುರಿತು 'ದಿಗ್ವಿಜಯ ನ್ಯೂಸ್​' ಬಳಿ ಅಜಯ್​ ಬಿಚ್ಚಿಟ್ಟ ಎಕ್ಸ್​ಕ್ಲ್ಯೂಸಿವ್​ ಮಾಹಿತಿ ಇಲ್ಲಿದೆ.

ಘಟನೆ ನಡೆಯುವ ಸಂದರ್ಭದಲ್ಲಿ ನಾನು ಅಲ್ಲಿದ್ದನಾದರೂ ನನ್ನ ಭಾಗದ ಚಿತ್ರೀಕರಣ ಮುಗಿಸಿ ಬ್ರೇಕ್​ನಲ್ಲಿದ್ದೆ. ನನ್ನ ಪಾಡಿಗೆ ನಾನು ಫೋನಿನಲ್ಲಿ ಬಿಜಿಯಾಗಿದ್ದೆ. ಏಕಾಏಕಿ ಎಲ್ಲರೂ ಓಡಲು ಆರಂಭಿಸಿದ್ರು. ನಾನು ಏನಾಯ್ತು? ಅಂತ ಕೇಳಿದೆ. ವಿವೇಕ್​ಗೆ ವಿದ್ಯುತ್ ತಂತಿ ತಗುಲಿದೆ ಎಂದರು. ನನ್ನ ಕಾಲಿನ ಮೂಳೆಯೂ ಕ್ರ್ಯಾಕ್ ಆಗಿರೋದ್ರಿಂದ ನನಗೂ ತಕ್ಷಣ ಓಡಲು ಆಗಲಿಲ್ಲ. ಆದರೂ ನೋಡಲು ನಾನೂ ಓಡಿ ಹೋದೆ. ಅಷ್ಟರಲ್ಲಿ ಆಂಬುಲೆನ್ಸ್ ಬಂದಿತ್ತು, ವಿವೇಕ್​ ಮತ್ತು ರಂಜಿತ್​ರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಅಜಯ್​ ಹೇಳಿದರು.

ನನ್ನ ಮೇಲೆ ರಂಜಿತ್ ಆರೋಪ ಮಾಡಿದ್ದಾರೆ. ಆ ರೀತಿ ಆಗಿಲ್ಲ. ಘಟನೆ ನಡೆದದ್ದನ್ನು ಕಣ್ಣಾರೆ ನೋಡಿದರೆ ಯಾರೂ ಸುಮ್ಮನಿರುವುದಿಲ್ಲ. ನಾನೂ ಸುಮ್ಮನಿರುತ್ತಿರಲಿಲ್ಲ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಶೂಟಿಂಗ್​ನಲ್ಲಿ ಅಪಘಾತ ಆಗುತ್ತವೆ. ಕಳೆದ ವಾರ ಇದೇ ಸೀನ್ ಚಿತ್ರೀಕರಿಸೋ ವೇಳೆ ನನಗೂ ಗಾಯವಾಯ್ತು. ಕಾಲಿನ ಮೂಳೆಗೆ ಪೆಟ್ಟಾಯ್ತು. ಅದೇ ಕಾರಣಕ್ಕೆ ಒಂದು ವಾರ ಶೂಟಿಂಗ್ ನಿಲ್ಲಿಸಲಾಗಿತ್ತು. ಮತ್ತೆ ಗುರುವಾರ ಚಿತ್ರೀಕರಣ ಶುರು ಮಾಡಿದ್ವಿ. ಚಿತ್ರೀಕರಣದ ಕೊನೆಯ ದಿನ ಇಂತಹದ್ದೊಂದು ದುರ್ಘಟನೆ ನಡೆದಿದೆ ಎನ್ನುತ್ತಲೇ ಅಜಯ್​ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net