More

    ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿ ಮೃತಪಟ್ಟರೆ ಪರಿಹಾರ ನೀಡಲು ಆದೇಶ

    ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ನಡೆಸುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿ ಮೃತಪಟ್ಟರೆ, ಗಾಯಗೊಂಡರೆ ಪರಿಹಾರ ನೀಡುವ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.

    ಚುನಾವಣಾ ಕರ್ತವ್ಯದಲ್ಲಿರುವಾಗ ಗಾಯಗೊಂಡ ಅಥವಾ ನಿಧನರಾದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗೆ ಅಥವಾ ಅವರ ಕುಟುಂಬದ ವಾರಸುದಾರರಿಗೆ ಪರಿಹಾರ ದೊರೆಯಲಿದೆ.

    ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಧನ ಹೊಂದಿದಲ್ಲಿ ಅವರ ವಾರಸುದಾರರಿಗೆ 15 ಲಕ್ಷ ರೂ. ಪರಿಹಾರಧನ ನೀಡಲಾಗುತ್ತದೆ. ಉಗ್ರಗಾಮಿ ಹಿಂಸೆಯಿಂದ ಅಥವಾ ಸಮಾಜ ವಿರೋಧಿ ಕೃತ್ಯದಿಂದ ಅಂದರೆ, ರಸ್ತೆ ಸ್ಫೋಟಕಗಳಿಂದ, ಬಾಂಬ್ ಸ್ಫೋಟಿಸುವುದರಿಂದ ಅಥವಾ ಮಾರಕ ಆಯುಧಗಳಿಂದ ಹಲ್ಲೆಗೆ ಒಳಗಾಗುವುದರಿಂದ ನಿಧನರಾದರಲ್ಲಿ 30 ಲಕ್ಷ ರೂ. ಪರಿಹಾರ ಧನ ನೀಡಲಾಗುತ್ತದೆ.

    ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಶಾಶ್ವತವಾಗಿ ಅಂಗವಿಕಲರಾದಲ್ಲಿ ಅಂದರೆ, ದೇಹದ ಯಾವುದೇ ಅಂಗಕ್ಕೆ ಹಾನಿಯಾದಲ್ಲಿ, ಕಣ್ಣಿನ ದೃಷ್ಟಿ ಕಳೆದುಕೊಂಡಲ್ಲಿ 7.50 ಲಕ್ಷ ರೂ. ಪರಿಹಾರ ನೀಡಬಹುದಾಗಿದೆ. ಆದರೆ, ಇಂತಹ ಅವಘಡಗಳು ಉಗ್ರಗಾಮಿಗಳ ಹಿಂಸೆಯಿಂದ ಅಥವಾ ಸಮಾಜ ವಿರೋಧಿ ಕೃತ್ಯಗಳಿಂದ ಸಂಭವಿಸಿದಲ್ಲಿ ದುಪ್ಪಟ್ಟು ಪರಿಹಾರಧನ ಅಂದರೆ 15 ಲಕ್ಷ ರೂ. ಪರಿಹಾರ ನೀಡಬಹುದು.

    ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಧನ ಹೊಂದಿದ ಅಥವಾ ಹಲ್ಲೆಗೆ ಒಳಗಾಗಿ ಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ಚುನಾವಣಾ ಕಾರ್ಯಕ್ಕೆ ಬಿಡುಗಡೆಯಾದ ಅನುದಾನದಿಂದಲೇ ಈ ವೆಚ್ಚ ಭರಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

    ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

    ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ವೇಳೆ ಬಿಎಸ್​ವೈ ಕಣ್ಣೀರಿಟ್ಟಿದ್ದನ್ನು ಸಹಿಸದೆ ಅಭಿಮಾನಿ ನೇಣಿಗೆ ಶರಣು!

    ತುಮಕೂರಲ್ಲಿ ಮುಂಡ, ಬಾಗಲಕೋಟೇಲಿ ರುಂಡ ಪತ್ತೆ! ಬಯಲಾಯ್ತು ಸೊಸೆ-ಬಿಎಂಟಿಸಿ ಬಸ್​ ಕಂಡಕ್ಟರ್​ ಅಸಲಿ ಮುಖವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts