More

    ತಾಪಂ, ಜಿಪಂ ಚುನಾವಣೆ ಡಿಸೆಂಬರ್​ ತನಕ ನಡೆಯಲ್ಲ: ಕೆ.ಎಸ್​.ಈಶ್ವರಪ್ಪ

    ದಾವಣಗೆರೆ: ಕರೊನಾ ಉಲ್ಬಣಿಸದಿದ್ದಲ್ಲಿ ರಾಜ್ಯದಲ್ಲಿ ಇಷ್ಟೊತ್ತಿಗೆ ತಾಪಂ ಮತ್ತು ಜಿಪಂ ಚುನಾವಣೆ ರಂಗೇರುತ್ತಿತ್ತು. 2ನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದಂತೆ ಇನ್ನೂ 6 ತಿಂಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಯಲ್ಲ ಎಂದು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಘೋಷಿಸಿದ್ದಾರೆ. ಸದ್ಯ ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು ತೆರೆಮರೆಯಲ್ಲಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಲಾಕ್​ಡೌನ್​ ಸಂಪೂರ್ಣವಾಗಿ ಅನ್​ಲಾಕ್​ ಆಗುತ್ತಿದ್ದಂತೆ ಚುನಾವಣೆ ನಡೆಯಲಿದೆ ಎಂದು ಹಲವು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿನ ಮೂರು ಪಕ್ಷಗಳ ಟಿಕೆಟ್​ ಆಕಾಂಕ್ಷಿತರು ಸ್ಥಳೀಯವಾಗಿ ಮತದಾರರ ಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಸಂದರ್ಭದಲ್ಲಿ ಸಚಿವ ಕೆ.ಎಸ್​.ಈಶ್ವರಪ್ಪ ಚುನಾವಣೆ ಯಾವಾಗ ನಡೆಯುತ್ತೆ ಎಂಬ ಕೂತೂಹಲಕ್ಕೆ ತೆರೆ ಎಳೆದಿದ್ದಾರೆ.

    ಕರೊನಾ ಅಲೆ ಸಂಪೂರ್ಣವಾಗಿ ಮುಗಿದಿಲ್ಲ. ಡಿಸೆಂಬರ್‌ವರೆಗೆ ಯಾವುದೇ ಚುನಾವಣೆ ನಡೆಯಲ್ಲ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಮಾಡಲ್ಲ. ಚುನಾವಣೆ ಬೇಡ ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಕೆಲಸವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

    ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

    ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

    ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts