More

    ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ

    ಮಂಗಳೂರು: ಕೋಟೆಕಾರು ಪಟ್ಟಣ ಪಂಚಾಯಿತಿಯ ಒಟ್ಟು 17 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ.

    ಕಳೆದ ಬಾರಿಯೂ 11 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್ ಕೂಡ ಕಳೆದ ಬಾರಿಯಂತೆ 4 ಸ್ಥಾನ ಉಳಿಸಿಕೊಂಡಿದೆ. ಇನ್ನೊಂದೆಡೆ ಎಸ್‌ಡಿಪಿಐ ಕೂಡ ಕಳೆದ ಬಾರಿಯಂತೆ 1 ಸ್ಥಾನ ಪಡೆದಿದೆ. ಒಂದು ಸ್ಥಾನ ಪಡೆದಿದ್ದ ಸಿಪಿಐಎಂ ಈ ಬಾರಿ ಯಾವುದೇ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು, ಆ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.

    ವಾರ್ಡ್ 1- ಅಡ್ಕ ಕಾಳಿಕಾಂಬ: ರಾಘವ ಗಟ್ಟಿ (ಬಿಜೆಪಿ), ವಾರ್ಡ್ 2 – ಕನೀರುತೋಟ: ಭವಾನಿ ದೇವದಾಸ್ (ಬಿಜೆಪಿ), ವಾರ್ಡ್ 3 – ಮಾಡೂರು: ಸುಜಿತ್ ಮಾಡೂರು (ಬಿಜೆಪಿ), ವಾರ್ಡ್4 – ಬಲ್ಯ: ಕಿರಣ್ ಕುಮಾರ್ (ಬಿಜೆಪಿ), ವಾರ್ಡ್ 5 – ಬಗಂಬಿಲ ಸೈಟ್: ಪ್ರವೀಣ್ ಬಗಂಬಿಲ (ಬಿಜೆಪಿ), ವಾರ್ಡ್ 6 – ವೈದ್ಯನಾಥ ನಗರ ಬಗಂಬಿಲ: ದಿವ್ಯಾ ಸತೀಶ್ (ಬಿಜೆಪಿ), ವಾರ್ಡ್ 7 – ಸುಳ್ಳಂಜೀರು, ಸಂಕೊಳಿಗೆ: ಉದಯ ಕುಮಾರ್ ಶೆಟ್ಟಿ (ಬಿಜೆಪಿ), ವಾರ್ಡ್ 8 -ತಾರಿಪಡ್ಪು: ಇಸಾಕ್ (ಕಾಂಗ್ರೆಸ್), ವಾರ್ಡ್ 9 – ಶಾರದಾನಗರ: ಅನಿತಾ ನಾರಾಯಣ (ಬಿಜೆಪಿ), ವಾರ್ಡ್ 10 -ಕುಶಾಲ್‌ನಗರ: ಧೀರಜ್ ಕುಶಾಲ್‌ನಗರ (ಬಿಜೆಪಿ), ವಾರ್ಡ್ 11 – ಮಡ್ಯಾರ್: ಹರೀಶ್ ರಾವ್ (ಪಕ್ಷೇತರ), ವಾರ್ಡ್ 12 – ಜಲಾಲ್‌ಭಾಗ್: ಆಯೆಷಾ ಜಲಾಲ್‌ಭಾಗ್ (ಕಾಂಗ್ರೆಸ್), ವಾರ್ಡ್ 13 – ಪನೀರ್: ಸೆಲಿಮಾ ಬಿ ಹಸೀನಾ ಶಮೀರ್ (ಎಸ್‌ಡಿಪಿಐ), ವಾರ್ಡ್ 14 – ಮಿತ್ರನಗರ: ಜಗದೀಶ ಕೊಂಡಾಣ (ಬಿಜೆಪಿ), ವಾರ್ಡ್ 15 -ಕೊಂಡಾಣ: ನವೀನ್ ಕೊಂಡಾಣ (ಬಿಜೆಪಿ), ವಾರ್ಡ್ 16 -ಅಜ್ಜಿನಡ್ಕ: ಮಹಮ್ಮದ್ ಬಾವ ಕೋಟೆಕಾರು (ಕಾಂಗ್ರೆಸ್), ವಾರ್ಡ್ 17 -ಕೋಮರಂಗಳ: ಜುಬೈದಾ (ಕಾಂಗ್ರೆಸ್).

    ಕೊಪ್ಪಳದಲ್ಲಿ ಕಾಂಗ್ರೆಸ್​ಗೆ ಬಲ, ಕಮಲಕ್ಕಿಲ್ಲ ಸ್ಪಷ್ಟ ಗರಿ: ಜೆಡಿಎಸ್- ಪಕ್ಷೇತರರೇ ನಿರ್ಣಾಯಕ

    ಅರ್ಚನಾ ರೆಡ್ಡಿ ಕೊಲೆ ಕೇಸ್​: ಜಿಮ್​ ಟ್ರೈನರ್​ ನವೀನ್​ ಕೋಟ್ಯಧೀಶ ಆಗಿದ್ದೇಗೆ?​ EXCLUSIVE ಮಾಹಿತಿ ಇಲ್ಲಿದೆ

    ಅರ್ಚನಾರೆಡ್ಡಿ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ನವೀನ್​ 2ನೇ ಅಲ್ಲ, 3ನೇ ಸಂಬಂಧ! ಆಕೆಯ ಮಗಳನ್ನೂ ಪಟಾಯಿಸಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts