More

    ಹಿರಿಯ ನಟ ಅಶ್ವತ್ಥ್​ ನಾರಾಯಣ್​ ಇನ್ನಿಲ್ಲ: ಡಾ.ರಾಜ್​ ಕುಟುಂಬದ 4 ತಲೆಮಾರಿನ ಕಲಾವಿದರ ಜತೆ ನಟಿಸಿದ ಹೆಗ್ಗಳಿಕೆ ಇವರದ್ದು

    ಬೆಂಗಳೂರು: ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಟಿ.ಆರ್​. ಅಶ್ವತ್ಥ್​ ನಾರಾಯಣ್​ (90) ನಿಧನರಾದರು.

    ಬಾಲನಟನಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಅಶ್ವತ್ಥ್​ ನಾರಾಯಣ್​, ‘ವಾಲ್ಮೀಕಿ’ ಮೂಲಕ ಚಿತ್ರರಂಗಕ್ಕೆ ನಟನಾಗಿ ಬಂದರು. ತ.ರಾ.ಸು ಅವರ ಕಾದಂಬರಿ ಆಧರಿಸಿ ನಿರ್ಮಾಣವಾದ ಡಾ. ರಾಜಕುಮಾರ್​ ಅಭಿನಯದ ‘ಚಂದವಳ್ಳಿಯ ತೋಟ’ ಚಿತ್ರದಲ್ಲಿ, ಅವರು ಸುಬ್ಬಾಭಟ್ಟ ಎಂಬ ನೆಗೆಟಿವ್​ ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ವೃತ್ತಿಬದುಕಿಗೆ ದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟ ಚಿತ್ರವಾಯಿತು.

    ಈ ಚಿತ್ರದ ನಂತರ ಹಲವು ಚಿತ್ರಗಳಲ್ಲಿ, ಅದರಲ್ಲೂ ಡಾ. ರಾಜಕುಮಾರ್​ ಅಭಿನಯದ ಹಲವಾರು ಚಿತ್ರಗಳಲ್ಲಿ ಅಶ್ವತ್ಥ್​ ನಾರಾಯಣ್​ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅದರಲ್ಲೂ ಬಹುತೇಕ ಚಿತ್ರಗಳಲ್ಲಿ ಅವರು ಅರ್ಚಕರಾಗಿ ನಟಿಸಿದ್ದರು. ‘ಬಬ್ರುವಾಹನ’, ‘ಕವಿರತ್ನ ಕಾಳಿದಾಸ’, ‘ದಂಗೆ ಎದ್ದ ಮಕ್ಕಳು’, ‘ತಾಯಿಗೆ ತಕ್ಕ ಮಗ’, ‘ಅನುರಾಗ ಅರಳಿತು’, “ಪ್ರೊಫೆಸರ್​ ಹುಚ್ಚೂರಾಯ’, ‘ಕಾಮನ ಬಿಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ನಾಲ್ಕು ತಲೆಮಾರಿನ ಕಲಾವಿದರ ಜತೆಗೆ ನಟಿಸಿದ ಹೆಗ್ಗಳಿಕೆ ಅಶ್ವತ್ಥ್​ ನಾರಾಯಣ್​ ಅವರಿಗಿದೆ. ಡಾ. ರಾಜ್​ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಜತೆಗೂ ನಟಿಸಿದ್ದ ಅವರು, ರಾಜ್​ ಮೊಮ್ಮಗ ವಿನಯ್​ ರಾಜಕುಮಾರ್​ ಅಭಿನಯದ ‘ಸಿದ್ಧಾರ್ಥ’ ಚಿತ್ರದಲ್ಲೂ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರವಿದ್ದರು.

    ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅಶ್ವತ್ಥ್​ ನಾರಾಯಣ್​ ಅವರು ಭಾನುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಮೂವರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

    ನನ್ನ ಹುಟ್ಟೂರು ಧಾರವಾಡ, ಪ್ಲೀಸ್​ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್​ ಪ್ರಜೆ

    ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

    ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts