More

    ಕೆಆರ್​ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ ಮಾಡಿದ ಜೆಡಿಎಸ್ ಶಾಸಕರು!

    ಕೆಆರ್​ಎಸ್: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಗೆ ಸೋಮವಾರ ಜೆಡಿಎಸ್ ಶಾಸಕರ ನೇತೃತ್ವದಲ್ಲಿ ದೃಷ್ಟಿ ನಿವಾರಣಾ ಪೂಜೆ ನೆರವೇರಿತು.

    ಗಣಿಗಾರಿಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ವಿಚಾರ ಸಂಸದೆ ಸುಮಲತಾ ಅಂಬರೀಷ್ ಹಾಗೂ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ನಡುವೆ ದೊಡ್ಡ ಮಟ್ಟದ ವಾಗ್ವಾದಕ್ಕೆ ಕಾರಣವಾಗಿತ್ತು. ಡ್ಯಾಂಗೆ ದೃಷ್ಟಿಯಾಗಿದ್ದು, ಪೂಜೆ ಮಾಡಿಸಬೇಕೆಂದು ರವೀಂದ್ರ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆಷಾಢ ಸೋಮವಾರದಂದು ಎರಡು ಗಂಟೆ ಕಾಲ ಧಾರ್ವಿುಕ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.

    ಬೃಂದಾವನದಲ್ಲಿರುವ ಕಾವೇರಿ ಪ್ರತಿಮೆ ಮುಂಭಾಗದಲ್ಲಿ ಹೋಮ ಕುಂಡ ಸ್ಥಾಪಿಸಲಾಗಿತ್ತು. ಮೊದಲಿಗೆ ಗಣಪತಿ ಪೂಜೆ, ಸಂಕಲ್ಪ, ದೇವರ ಕಳಸಗಳ ಸ್ಥಾಪನೆ ಮಾಡಿದ ನಂತರ ಕಾವೇರಿ ಮಾತೆಯ ಪ್ರತಿಮೆಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ದುರ್ಗಾ, ಮೃತ್ಯುಂಜಯ, ದೃಷ್ಟಿ ನಿವಾರಕ ಹೋಮಗಳನ್ನು ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಮತ್ತು ಕೃಷ್ಣಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಪೂರ್ಣಾಹುತಿಗೆ ಶಾಸಕರು ಪೂಜೆ ಸಲ್ಲಿಸಿದ ನಂತರ ಅಣೆಕಟ್ಟೆಗೆ ದೃಷ್ಟಿ ತೆಗೆದು ಕುಂಬಳಕಾಯಿಗಳನ್ನು ಶಾಸಕರು ಒಡೆದು ಪೂಜೆ ಸಂಪನ್ನಗೊಳಿಸಿದರು. ಜಿಲ್ಲೆಯ ಶಾಸಕರಾದ ಸಿ.ಎಸ್.ಪುಟ್ಟರಾಜು, ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಸುರೇಶ್​ಗೌಡ, ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಎಂಎಲ್​ಸಿಗಳಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಸಮ್ಮುಖದಲ್ಲಿ ಪೂಜೆ, ಅಭಿಷೇಕ ಮತ್ತು ಹೋಮ ಕಾರ್ಯಗಳು ನಡೆದವು.

    ಕೆಆರ್​ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ ಮಾಡಿದ ಜೆಡಿಎಸ್ ಶಾಸಕರು!

    ಪೂಜೆ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಣೆಕಟ್ಟೆ ಕುರಿತು ಕೆಲವರು ಅಶುಭ ಹೇಳಿಕೆ ಮತ್ತು ಅಹಿತಕರ ಮಾತುಗಳನ್ನಾಡಿದರು. ಇದರಿಂದಾಗಿ ಜನರಲ್ಲಿ ಭಯ ಉಂಟಾಗುವುದರ ಜತೆಗೆ ಡ್ಯಾಂಗೆ ದೃಷ್ಟಿ ದೋಷವಾಗಿದ್ದು, ಕೆಲ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೃಷ್ಟಿ ನಿವಾರಣೆಗೆ ದುರ್ಗಾ ಮಾತೆಗೆ ಹೋಮ ಮಾಡಿದ್ದೇವೆ. ಈ ಪೂಜೆ ಮಾಡಿದ್ದರಿಂದ ಮನಸ್ಸಿಗೆ ಸಮಾಧಾನವಾಗಿದೆ ಎಂದು ಸಂಸದೆ ಸುಮಲತಾಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಕೆಆರ್​ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ ಮಾಡಿದ ಜೆಡಿಎಸ್ ಶಾಸಕರು!

    ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷ ನಾಗೇಂದ್ರಕುಮಾರ್, ಸದಸ್ಯರಾದ ಸಿ.ಮಂಜುನಾಥ್, ರವಿಕುಮಾರ್, ಮೀನು ರಾಜಣ್ಣ, ಪಾಪಣ್ಣ, ನರಸಿಂಹ, ಸ್ನೇಕ್ ದೀಪು, ಮೂರ್ತಿ, ಪಂಕಜ, ಸರಸ್ವತಿ, ಜಯಂತಿ, ಶ್ರೀರಂಗಪಟ್ಟಣ ಪುರಸಭೆ ಉಪಾಧ್ಯಕ್ಷ ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಎಚ್.ಎ.ವಿಜಯಕುಮಾರ್, ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಮಂಜುನಾಥ್, ಹರೀಶ್, ಮನು ಇದ್ದರು.

    ಇದು ಶಿವಮೊಗ್ಗ ಕೌತುಕ! ಅತಿ ಹೆಚ್ಚು ಸಿಎಂ ಕೊಟ್ರೂ ಎಲ್ಲರ ಅಧಿಕಾರವೂ ಅರ್ಧಚಂದ್ರ, ಇದೆಂಥ ಕಂಟಕ?

    ಇಲ್ಲಿವೆ ‘ಅಭಿನಯ ಶಾರದೆ’ಯ ಅಪರೂಪದ ಫೋಟೋಗಳು

    ದುಂಡಗೆ, ದಪ್ಪಗಿದ್ದ ಕಮಲಾಗೆ ಸಹಪಾಠಿಗಳು ಕೊಟ್ಟ ಕೀಟಲೆ ಅಷ್ಟಿಷ್ಟಲ್ಲ! ಅದೇ ಬಾಲೆ ಜಯಂತಿ ಆದ ಇಂಟ್ರೆಸ್ಟಿಂಗ್​ ಸ್ಟೋರಿ ಇದು

    ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಯಡಿಯೂರಪ್ಪ! ಕೊನೇ ಕ್ಷಣದಲ್ಲಿ ಅಧಿಕೃತ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts