ಅಪ್ಪಾಜಿಗೌಡ್ರ ಮಾತಿಗೆ ವೇದಿಕೆಯಲ್ಲೇ ಸಚಿವ ನಾರಾಯಣಸ್ವಾಮಿ ಆಕ್ಷೇಪ! ಯಾಕೆ ಈ ರೀತಿ ಹೇಳ್ತೀರಿ? ಎಂದು ತರಾಟೆ

mandya appajigowad
Published on

ಮಂಡ್ಯ: ಪಾಂಡವಪುರ ತಾಲ್ಲೂಕಿನ ಸಣಬ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆರೆ ತುಂಬಿಸುವ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್​ ಎಂಎಲ್​ಸಿ ಅಪ್ಪಾಜಿಗೌಡ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಸಚಿವ ನಾರಾಯಣಗೌಡ ಸಿಡಿಮಿಡಿಗೊಂಡ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಅಪ್ಪಾಜಿಗೌಡ ಮಾತನಾಡುತ್ತಾ, ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ 8 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ ಎನ್ನುತ್ತಿದ್ದಂತೆ ವೇದಿಕೆಯಲ್ಲೇ ಗರಂ ಆದ ನಾರಾಯಣಗೌಡ, ಮಂಡ್ಯ ಜಿಲ್ಲೆಗೆ ಎಚ್​ಡಿಕೆ 8 ಸಾವಿರ ಕೋಟಿ ರೂ. ಅನುದಾನ ಕೊಟ್ಟಿಲ್ಲ. ಮಗನ ಚುನಾವಣೆಯಲ್ಲಿ ಬಾಯಲ್ಲಿ ಹೇಳಿಕೊಂಡು ಬಂದಿದ್ದಷ್ಟೆ. ಯಾಕೆ ಈ ರೀತಿ ಹೇಳ್ತೀರಿ? ಸುಳ್ಳು ಹೇಳಬಾರದು. ಮಂಡ್ಯ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ನಿಮ್ಮವರು 8 ಸಾವಿರ ಕೋಟಿ ರೂ. ಬಿಡುಗಡೆ ಮಾಡೋದಾಗಿ ಹೇಳಿದ್ರು. ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ಈ ವೇಳೆ ಸಚಿವ ನಾರಾಯಣಗೌಡರನ್ನು ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ಸಮಾಧಾನ ಮಾಡಿದರು. ಪಕ್ಕದಲ್ಲೇ ಕುಳಿತ್ತಿದ್ದ ಸಚಿವ ಮಾಧುಸ್ವಾಮಿ ನಕ್ಕು ಸುಮ್ಮನಾದರು. ಈ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net