More

    ಕೊನೆಗೂ ತನ್ನ ನಿಲುವು ಪ್ರಕಟಿಸಿದ ಜಿಟಿಡಿ: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವೆ!

    ಮೈಸೂರು: ಜೆಡಿಎಸ್‌ನಿಂದ ಮಾನಸಿಕವಾಗಿ ಹೊರ ಬಂದು, ಕಾಂಗ್ರೆಸ್‌ನೊಂದಿಗೆ ನಂಟು ಬೆಳೆಸಿಕೊಂಡಿರುವ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಅವರು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ.

    ನಾಳೆ(ಜೂ.10) ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಜಿ.ಟಿ.ದೇವೇಗೌಡರು ತಿಳಿಸಿದ್ದಾರೆ. ‘ನಾನು ಜೆಡಿಎಸ್‌ನಿಂದ ಅಧಿಕೃತವಾಗಿ ಆಯ್ಕೆಯಾಗಿದ್ದು, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ತಮಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಕೂಡ ಕೇಳಿದ್ದಾರೆ. ನನ್ನ ಬೆಂಬಲಿಗರು ಮತ್ತು ಕ್ಷೇತದ ಮುಖಂಡರ ಅಭಿಪ್ರಾಯವೂ ಇದೇ ಆಗಿದೆ. ಈ ಎಲ್ಲ ಕಾರಣದಿಂದ ನಾನು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ. ಬೇರೆ ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಜಿ.ಟಿ.ದೇವೇಗೌಡರು ತಿಳಿಸಿದ್ದಾರೆ.

    ಟ್ರಿಪ್ ನೆಪದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಶಾಸಕ ಗೌರಿಶಂಕರ್ ನಾಪತ್ತೆಯಾಗಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಗೌರಿಶಂಕರ್ ಹಾಜರಾಗೋದು ಅನುಮಾನ ಎನ್ನುತ್ತಿವೆ ಮೂಲಗಳು. ಅತ್ತ ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಕೈಕೊಡುವ ಸಾಧ್ಯತೆ ಇದೆ. ಈ ನಡುವೆ ಹಾಗೇ ಜಿ.ಟಿ.ದೇವೇಗೌಡರ ಬೆಂಬಲ ಕಾಂಗ್ರೆಸ್​ಗೆ ಎಂಬ ಮಾತು ಕೇಳಿಬರುತ್ತಿತ್ತು. ಈ ಊಹಾಪೋಹಕ್ಕೆ ತೆರೆ ಎಳೇದ ಜಿಟಿಡಿ ಅವರು ಜೆಡಿಎಸ್​ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಜೆಡಿಎಸ್​ನ ಆತಂಕ ತುಸು ಕಡಿಮೆ ಆಗಿದೆ.

    ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ! ಆರೋಪಿ ಬಂಧನಕ್ಕೆ ಪಟ್ಟು

    ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

    ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts