More

    ಚುನಾವಣೆ ಸಮೀಪದಲ್ಲೇ ಗುಜರಾತ್​ನಲ್ಲಿ ಮಹತ್ತರ ಬೆಳವಣಿಗೆ: ಕಾಂಗ್ರೆಸ್​ಗೆ ಹಾರ್ದಿಕ್​ ಪಟೇಲ್ ಗುಡ್​ ಬೈ​!

    ಗುಜರಾತ್​: ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಿನ ರಾಜ್ಯ ರಾಜಕೀಯದಲ್ಲಿ ಬುಧವಾರ ಮಹತ್ತರ ಬೆಳವಣಿಗೆಯಾಗಿದೆ. ಗುಜರಾತ್​ನ​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್​ನಿಂದ ಹೊರಬಂದಿದ್ದಾರೆ.

    ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾರ್ದಿಕ್​ ಪಟೇಲ್​, ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು, ಮಿತ್ರರು, ರಾಜ್ಯದ ಜನತೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಗುಜರಾತ್​ಗಾಗಿ ನನ್ನ ಮುಂದಿನ ನಡೆ ಇರಲಿದೆ ಎಂದು ಟ್ವೀಟ್​ ಮಾಡಿದ್ದಾರೆ.

    28 ವರ್ಷದ ಹಾರ್ದಿಕ್ ಪಟೇಲ್​, 2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರಲ್ಲಿ ಕಾಂಗ್ರೆಸ್​ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಪ್ರಭಾವಿ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್​, ಕಾಂಗ್ರೆಸ್​ ತೊರೆದಿದ್ದು, ಪಕ್ಷಕ್ಕೆ ಪೆಟ್ಟು ಆಗಿದ್ದಂತೂ ನಿಜ. ಹಾರ್ದಿಕ್ ಯಾವ ಪಕ್ಷಕ್ಕೆ ಸೇರ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.

    ಮೈಸೂರಲ್ಲಿ ವಿಕೃತ ಕಾಮಿ: ಈತನ ಗಾಳಕ್ಕೆ ಬಿದ್ದ ಯುವತಿಯರ ಪಾಡು ಹೇಳತೀರದು… ಮೊಬೈಲ್​ ನೋಡಿ ಬೆಚ್ಚಿಬಿದ್ದ ಪೊಲೀಸರು

    ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts