More

    ಮೌಲ್ಯಗಳಿದ್ದರೆ ಉತ್ತಮ ಜೀವನ ಸಾಧ್ಯ

    ನಂಜನಗೂಡು: ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮುದಾಯದಲ್ಲಿ ಸಹಬಾಳ್ವೆ, ಭ್ರಾತೃತ್ವದಿಂದ ಜೀವನ ನಡೆಸಲು ಸಾಧ್ಯ ಎಂದು ಸಂಗಮ ಕ್ಷೇತ್ರದ ಕಾರ್ಯಸ್ವಾಮಿ ಗದ್ದುಗೆ ಮಠದ ಮಹೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಸುಕ್ಷೇತ್ರ ಸಂಗಮ ಶ್ರೀ ಮಹದೇವ ತಾತಾ ಅವರ ಗದ್ದುಗೆಯಲ್ಲಿ ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬುಧವಾರ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಹಾಗೂ ಸಂಸ್ಕಾರವನ್ನು ಕಲಿಸುವ ಶಿಕ್ಷಣ ಪ್ರಸ್ತುತ ಕಾಲಘಟಕ್ಕೆ ಅಗತ್ಯವಿದೆ. ಎಷ್ಟೇ ಶಿಕ್ಷಿತರಾದರೂ ನೈತಿಕ ಮೌಲ್ಯ ಹೊಂದಿಲ್ಲದಿದ್ದರೆ ಅನಕ್ಷರಸ್ಥನಿಗಿಂತಲೂ ಕಡೆಯಾಗಿರುತ್ತಾರೆ. ಈ ಕಾರಣಕ್ಕಾಗಿಯೇ ಇಂತಹ ಶಿಬಿರಗಳ ಆಯೋಜನೆ ಅತ್ಯಗತ್ಯ. ನಮ್ಮ ಪರಂಪರೆಯ ಅರಿವು ನಮ್ಮಲ್ಲಿ ಜಾಗೃತವಾಗಬೇಕಾದರೆ ಪ್ರತಿಯೊಬ್ಬರೂ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಂಸ್ಕಾರವಂತರಾದರೆ ಮಾತ್ರ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದರು.

    ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಮಾತನಾಡಿ, ವ್ಯಕ್ತಿಯು ಸಮಾಜದಲ್ಲಿ ಬದುಕುವಾಗ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗತ್ತದೆ. ಅಂತಹ ಸಂದರ್ಭದಲ್ಲಿ ಹೊಂದಾಣಿಕೆ ಮನಸ್ಥಿತಿ ಬೆಳೆಸಿಕೊಂಡು ಸೂಕ್ಷ್ಮಗ್ರಾಹಿಯಾಗಿ ಆಲೋಚನೆಯ ಮೂಲಕ ಪರಿಸ್ಥಿತಿಗಳನ್ನು ನಿರ್ವಹಿಸಬೇಕು. ಸಂಯಮ, ಸಹನೆಯನ್ನು ಮೈಗೂಡಿಸಿಕೊಂಡಾಗ ಎಂತಹ ಕ್ಲಿಷ್ಟ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತದೆ. ಈ ದೃಷ್ಟಿಯಿಂದ ಸಮುದಾಯ ಜೀವನ ಶಿಬಿರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.

    ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ವಿ.ಯೋಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮ ಕ್ಷೇತ್ರ ಶ್ರೀ ಮಹದೇವ ತಾತ ಟ್ರಸ್ಟ್ ಕಾರ್ಯದರ್ಶಿ ಕೆಂಡಗಣ್ಣಪ್ಪ, ಕಾಲೇಜಿನ ಜಯಲಕ್ಷ್ಮೀ, ಸ್ವಾತಿ, ಗುಣಶ್ರೀ, ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts