More

    ಸುಭದ್ರ ಸರ್ಕಾರ ಅಲ್ಲಾಡಿಸಲು ವ್ಯರ್ಥ ಪ್ರಯತ್ನ

    ಶಿವಮೊಗ್ಗ: ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ. ಇದು ಸುಭದ್ರ ಸರ್ಕಾರವನ್ನು ಅಲ್ಲಾಡಿಸುವ ವ್ಯರ್ಥ ಪ್ರಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

    ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ತಾವು ಭ್ರಷ್ಟಾಚಾರ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಅವರು ಅನೇಕ ಬಾರಿ ಮಾತನಾಡುವಾಗ ಕಾಂಗ್ರೆಸ್ಸಿಗರು ನಮಗಿಂತ ಹೆಚ್ಚು ಕಮಿಷನ್ ತೆಗೆದುಕೊಳ್ಳುತ್ತಾರೆ. ಅವರದ್ದು ಶೇ.80ರಷ್ಟಾಗುತ್ತದೆ ಎಂದು ಹೇಳುತ್ತಲೇ ನಾವು ಶೇ.40ರಷ್ಟು ಕಮಿಷನ್ ತಿಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಮೊದಲು ಅವರನ್ನು ಬಂಧಿಸಬೇಕು. ಬಿಜೆಪಿ ಸರ್ಕಾರ ಇದ್ದಾಗಲೇ ಅವರು ಅಧಿಕಾರ ಕಳೆದುಕೊಂಡವರು. ಐಟಿ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ ಎಂದರು.
    ಜೆಡಿಎಸ್ ಬಿಜೆಪಿ ಮೈತ್ರಿ ಕುರಿತು ಪ್ರಸ್ತಾಪಿಸಿದ ಅವರು, ಇದು ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಅವರ ಪ್ರೇಮ ಪ್ರಸಂಗವಾಗಿದೆ. ಸದ್ಯದಲ್ಲಿಯೇ ಅದರ ವಿಚ್ಛೇದನ ಗೊತ್ತಾಗುತ್ತದೆ. ಇಬ್ರಾಹಿಂ ಅವರು ಇಂಡಿಯಾ ಟೀಮ್ ಅನ್ನು ಬೆಂಬಲಿಸುತ್ತಿರುವುದು ಸ್ವಾಗತಾರ್ಹ ಎಂದರು.

    ಬಿಜೆಪಿ ಆಡಳಿತಾವಧಿಯಲ್ಲಿ ಸಾವಿರ ಕೋಟಿ ಸಾಲ ಮಾಡಿದ್ದರು. ಅದನ್ನು ಈಗ ತೀರಿಸಬೇಕಾಗಿದೆ. ಕಾಮಗಾರಿಗಳ ಟೆಂಡರ್ ಕರೆಯುವ ವೇಳೆಯಲ್ಲಿ ಬಿಜೆಪಿಯ ನಾಯಕರು ಹಣ ಕಬಳಿಸಿದ್ದಾರೆ. ಈಗ ಅಂತಿಮ ಬಿಲ್ ಮಾಡುವಾಗ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿಯೊಬ್ಬರು ಈಗ ಕಾಂಗ್ರೆಸ್ ನಾಯಕರ ಮನೆಬಾಗಿಲು ತಟ್ಟುತ್ತಿದ್ದು 50 ಕೋಟಿ ರೂ. ಕೊಡುತ್ತೇವೆಂದು ಹೇಳುತ್ತಿದ್ದಾರೆ.
    ಆಯನೂರು ಮಂಜುನಾಥ, ಕೆಪಿಸಿಸಿ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts