More

    Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ

    ಬೆಳಗಾವಿ: ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗುತ್ತಿದೆ. ಜಲಗಂಡಾಂತರಕ್ಕೆ ಖಾನಾಪುರ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಇದನ್ನು ಸಾಕ್ಷೀಕರಿಸುವ ದೃಶ್ಯ ಇಲ್ಲಿದೆ.

    ಖಾನಾಪುರ ತಾಲೂಕಿನ ಲೋಂಡಾ ಗ್ರಾಮದಲ್ಲಿ ಪ್ರವಾಹದ ಭೀತಿ ಆವರಿಸಿದ್ದ, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಸಂತ್ರಸ್ತರಿಗೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್​ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ರೈತರು ಫ್ಲಾಟ್ ಫಾರ್ಮ್​ನಲ್ಲಿಯೇ ದನಕರುಗಳನ್ನ ಕಟ್ಟಿ ಹಾಕಿದ್ದಾರೆ.
    Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ

    ಖಾನಾಪುರ ತಾಲೂಕಿನ ಚೋರ್ಲಾ ಘಾಟ್​ನಲ್ಲಿ ಭೂ ಕುಸಿತವಾಗಿದ್ದು, ಕರ್ನಾಟಕ-ಗೋವಾ ನಡುವೆ ಸಂಚಾರ ಸ್ಥಗಿತಗೊಂಡಿದೆ. ಕಣಕುಂಬಿ ಮಾವುಲಿ ದೇವಾಲಯದ ಬಳಿ ಮಳೆಯ ನೀರು ರಸ್ತೆಯನ್ನು ಸೀಳಿಕೊಂಡು ಹರಿಯುತ್ತಿದೆ. ಲೋಂಡಾ, ರುಮೇವಾಡಿ ಮತ್ತು ಖಾನಾಪುರ ಪಟ್ಡಣದ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ.
    Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ

    ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ ನದಿ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ನದಿ ದಡದಿಂದ ಸುಮಾರು 2 ಕಿಮೀವರೆಗೂ ಹಿನ್ನೀರು ವ್ಯಾಪಿಸಿದೆ. ನದಿ ದಡದ ಕಲ್ಲೇಶ್ವರ ದೇವಸ್ಥಾನವೂ ಜಲಾವೃತಗೊಂಡಿದೆ.
    Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ

    ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮಕ್ಕೆ ದೂಧಗಂಗಾ ನದಿ ನೀರು ಹರಿಯುತ್ತಿದ್ದು, ಮಾಂಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವೂ ಜಲಾವೃತಗೊಂಡಿದೆ. ಆಸ್ಪತ್ರೆಯ ಔಷಧ ಹಾಗೂ ಮಾತ್ರೆಗಳನ್ನು ಸಮೀಪದ ಶಾಲೆಗೆ ರವಾನಿಸಲಾಯಿತು.
    Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ

    ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

    7 ಗ್ರಾಮಗಳು ಮುಳುಗಡೆ: ಜನರನ್ನು ಸ್ಥಳಾಂತರಿಸುವಾಗ ದೋಣಿ ಮಗುಚಿ ಭಾರಿ ಅನಾಹುತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts