More

    ಮಾಂಸ ತಿನ್ನುವ ಜಂತುವಿನ ಅತಿ ಭಯಾನಕ ಸ್ಟೋರಿ: ಯುರೋಪ್​ ಬಳಿಕ ಫ್ರಾನ್ಸ್ ಮೇಲೆ ಜಂತುವಿನ ದಾಳಿ

    ಪ್ಯಾರಿಸ್​: ಅರ್ಜೆಂಟೀನಾ ಮೂಲದ ಮಾಂಸ ತಿನ್ನುವ ಜಂತು ಪ್ರಭೇದ ಇದೀಗ ಶೇ 75 ರಷ್ಟು ಫ್ರಾನ್ಸ್​​ ಮುಖ್ಯಭೂಮಿಯನ್ನು ವಿಸ್ತರಿಸಿದ್ದು, ಯುನೈಟೆಡ್​​ ಕಿಂಗ್​ಡಮ್​ನಲ್ಲೂ ಇಷ್ಟೇ ಉಪಸ್ಥಿತಿಯನ್ನು ಹೊಂದಿರಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

    ತೆಳ್ಳನೆಯ ಕಂದು ಬಣ್ಣದ ಚಪ್ಪಟೆಯಾಕಾರದ ಜಂತು ಪ್ರಭೇದವನ್ನು ಒಬಾಮಾ ನುಂಗಾರಾ ಎಂದು ಕರೆಯಲಾಗಿದೆ. ಇದನ್ನು ಆಕಸ್ಮಿಕವಾಗಿ ದಕ್ಷಿಣ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದ್ದು, ಇದೀಗ ಎರೆಹುಳು ಮತ್ತು ಬಸವನ ಹುಳು ಸೇರಿದಂತೆ ಸ್ಥಳೀಯ ವನ್ಯಜೀವಿಯನ್ನು ಧ್ವಂಸ ಮಾಡುತ್ತಿದೆ. ಭಯಾನಕ ಮಾಹಿತಿಯೆಂದರೆ ತಾನು ವಿಸ್ತರಿಸಿದ ಮಣ್ಣವನ್ನು ಇದು ಹಾಳುಗೆಡುವುತ್ತಿದೆ.

    ಸ್ಪೇನ್​, ಪೋರ್ಚುಗಲ್​, ಇಟಲಿ, ಬೆಲ್ಜಿಯಂ ಮತ್ತು ಯುಕೆಯಲ್ಲಿಯೂ ತನ್ನ ಉಪಸ್ಥಿತಿಯನ್ನು ಹೊಂದಿರುವ ಈ ಜಂತು ಇದೀಗ ಒಟ್ಟು 96 ಫ್ರೆಂಚ್​ ಮೆಟ್ರೋಪಾಲಿಟನ್​ ಜಿಲ್ಲೆಗಳಲ್ಲಿ ಬಹುತೇಕ 72 ಜಿಲ್ಲೆಗಳಿಗೂ ಇದು ವಿಸ್ತರಿಸಿದೆ.

    ಮಾಂಸ ತಿನ್ನುವ ಜಂತು ಅಂದಾಜು ಮೂರು ಇಂಚುಗಳಷ್ಟು ಉದ್ದ ಬೆಳೆಯುತ್ತದೆ. ಅಲ್ಲದೆ, ಇಡೀ ದೇಹದ ಉದ್ದಕ್ಕೂ ನೂರಾರು ಸಣ್ಣ ಕಣ್ಣುಗಳನ್ನು ಹೊಂದಿದೆ. ಅಟ್ಲಾಂಟಿಕ್ ಕರಾವಳಿಯಲ್ಲಿ ಹಾಗೂ ಸ್ಪ್ಯಾನಿಷ್ ಗಡಿಯಿಂದ ಫ್ರಾನ್ಸ್‌ನ ವಾಯುವ್ಯದಲ್ಲಿರುವ ಬ್ರಿಟಾನಿಯವರೆಗೂ ಹಾಗೂ ಮೆಡಿಟರೇನಿಯನ್ ಪ್ರದೇಶದಲ್ಲೂ ಈ ಪ್ರಭೇದಗಳು ಹೇರಳವಾಗಿವೆ. ನಿಜ ಸಂಗತಿಯೆಂದರೆ ಫ್ರಾನ್ಸ್​ ಉದ್ದಗಲಕ್ಕೂ ಈ ಪ್ರಬೇಧ ವೇಗವಾಗಿ ಬೆಳೆಯುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಇಂಗ್ಲಿಷ್​ ಕಾಲುವೆಯನ್ನು ಈಗಾಗಲೇ ದಾಟಿವೆ ಎಂಬ ಆತಂಕವು ಎದುರಾಗಿದೆ.

    ಒಬಾಮಾ ನುಂಗಾರಾ ಅತಿ ಭಯಾನಕ ಪ್ರಭೇದವಾಗಿದೆ. ಆಕ್ರಮಣಕಾರಿಯಾದ ಜಂತುವು ಅರ್ಜೆಂಟಿನಾ ಮೂಲದ್ದದಾರೂ ಯೂರೋಪ್​ನಲ್ಲಿ ಮೊದಲು ಪರಿಚಿತವಾಯಿತು. ಸಂದರ್ಭನುಸಾರವಾಗಿ ಇದು ಸ್ಪೇನ್​, ಸ್ಪೇನ್​, ಪೋರ್ಚುಗಲ್​, ಇಟಲಿ, ಬೆಲ್ಜಿಯಂ ಮತ್ತು ಯುಕೆಯಲ್ಲಿ ವಿಸ್ತರಿಸಿದೆ. ಆದಾಗ್ಯೂ ಯಾವೊಂದು ದೇಶವು ಇದರ ಪ್ರಮಾಣದ ಬಗ್ಗೆ ಯಾವುದೇ ಅಧ್ಯಯನವನ್ನು ನಡೆಸಿಲ್ಲ. ಇದು ಜೀವವೈವಿಧ್ಯತೆ ಮಾತ್ರವಲ್ಲದೆ, ಮಣ್ಣಿನ ಪರಿಸರ ವ್ಯವಸ್ಥೆಗೂ ಮಾರಕವಾಗಿದೆ. ಈಗಾಗಲೇ ಇದು ಯೂರೋಪ್​ನಲ್ಲಿ ಸಾಬೀತಾಗಿದೆ ಎಂದು ಅನೇಕ ಸಂಶೋಧರ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts