More

    VIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!

    ಹೊಸಕೋಟೆ: ನೀರು ಬರಬೇಕಿದ್ದ ಕೊಳವೆ ಬಾಯಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅಪ್ಪಿತಪ್ಪಿ ಈ ನೀರನ್ನೇನಾದರೂ ಕೃಷಿಗೆ ಬಳಸಿದರೆ ಸುಟ್ಟುಹೋಗುತ್ತವೆ!

    ಹೌದು, ಇಂತಹದ್ದೊಂದು ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗುಂಡಿ ಗ್ರಾಮದ ರೈತರ ಕೊಳವೆ ಬಾವಿಗಳಲ್ಲಿ ವಿಪರೀತವಾಗಿ ಕಾಡುತ್ತಿದೆ. ವಿಷಪೂರಿತ ನೀರಿನಿಂದಾಗುತ್ತಿರುವ ತೊಂದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ರೈತರು ಅಳಲು ತೋಡಿಕೊಂಡಿದ್ದರೂ ಪರಿಹಾರ ಸಿಕ್ಕಿಲ್ಲ.

    ಇದನ್ನೂ ಓದಿರಿ ಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!

    ದೇವನಗುಂಡಿ ಬಳಿ ಆಯಿಲ್ ಕಂಪನಿಗಳಿದ್ದು, ಅಲ್ಲಿನ ವೇಸ್ಟೇಜ್ ಮಳೆಗಾಲದಲ್ಲಿ ಸಮೀಪದ ಬಾವಿಗಳಿಗೆ ಹರಿದು ಬರುತ್ತಿತ್ತು. ಈಗ ​ನಿರುಪಯುಕ್ತ ಕೊಳವೆಬಾವಿಗಳಿಗೆ ಕಂಪನಿಯವರು ಬಿಡುತ್ತಿದ್ದಾರೆ. ಪರಿಣಾಮ ಪಕ್ಕದಲ್ಲಿರುವ ರೈತರ ಜಮೀನುಗಳ ಕೊಳವೆಬಾವಿಯಲ್ಲಿ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂಬ ಆರೋಪ ರೈತರದ್ದು.

    ಆಯಿಲ್​ ಕಂಪನಿಗಳು ನಿರುಪಯುಕ್ತ ಕೊಳವೆಬಾವಿಗಳಿಗೆ ಹರಿಸುತ್ತಿರುವ ವೇಸ್ಟೇಜ್​ ಅಂತರ್ಜಲ ಸೇರುತ್ತಿದ್ದು, ನೀರು ವಿಷಕಾರಿಯಾಗುತ್ತಿದೆ. ಅಕ್ಕಪಕ್ಕದ ಕೊಳವೆಬಾವಿಗಳಲ್ಲೂ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಕೃಷಿ ಮಾಡಲು ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ರೋಗದ ಭೀತಿಯೂ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

    ಇದನ್ನೂ ನೋಡಿ… 

    ಬೋರ್​ವೆಲ್​ ನೀರಿಗೆ ಬೆಂಕಿ ಇಟ್ರೆ ಉರಿಯುತ್ತೆ!

    ಕೊಳವೆಬಾವಿಯಲ್ಲಿ ನೀರಿದ್ದರೂ ಹೇಗೆ ಬೆಂಕಿ ಹೊತ್ತಿಕೊಳ್ಳುತ್ತೆ ನೋಡಿ… ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗುಂಡಿ ಬಳಿ ಇರುವ ಆಯಿಲ್ ಕಂಪನಿಗಳ ವೇಸ್ಟೇಜ್ ಅಂತರ್ಜಲ ಸೇರುತ್ತಿದ್ದು, ಪಕ್ಕದಲ್ಲಿರುವ ರೈತರ ಜಮೀನುಗಳ ಬೋರ್​ವೆಲ್​ಗಳಲ್ಲಿ ಅನಿಲ ಮಿಶ್ರಿತ ನೀರು ಬರುತ್ತಿದೆ. #Hosakote #WaterPipe #Burning #Agriculture #Farmers #Devanagundi #PoisonousWater

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 28, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts