More

    43 ಲಕ್ಷಕ್ಕೆ ಮರುಹರಾಜಾಯ್ತು ಮಹಿಂದ್ರಾ ಥಾರ್​ ಜೀಪ್​! ದುಬೈ ಮೂಲದ ಉದ್ಯಮಿಯಿಂದ ಖರೀದಿ

    ತಿರುವನಂತಪುರಂ: ಕಳೆದ ವರ್ಷ ಡಿಸೆಂಬರ್​​ನಲ್ಲಿ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಅರ್ಪಿಸಲಾಗಿದ್ದ ಮಹೀಂದ್ರಾ ಥಾರ್​ ಜೀಪ್​​ ಅನ್ನು ಯುಎಇ ಮೂಲದ ಉದ್ಯಮಿ 43 ಲಕ್ಷಕ್ಕೆ ಖರೀದಿಸಿದ್ದಾರೆ.

    ಸೋಮವಾರ ನಡೆದ ಮರುಹರಾಜಿನಲ್ಲಿ ಉದ್ಯಮಿ ವಿಘ್ನೇಶ್​ ವಿಜಯಕುಮಾರ್​ ಅವರು ಅತಿ ಹೆಚ್ಚು ಬೆಲೆಗೆ ಖರೀದಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 15 ಉದ್ಯಮಿಗಳು ಪಾಲ್ಗೊಂಡಿದ್ದರು.ಮೊದಲ ಹರಾಜಿನಲ್ಲಿ 33 ಲಕ್ಷಕ್ಕೆ ಕರೆಯಲಾಗಿತ್ತು, ಈ ನಂತರ 40.40 ಲಕ್ಷ ಕೊನೆಗೆ 43 ಲಕ್ಷ ರೂ.ಭಾರೀ ಮೊತ್ತಕ್ಕೆ ಖರೀದಿಯಾಗಿದೆ.

    ಕೇರಳ ಹೈಕೋರ್ಟ್​ ಆದೇಶ ಮೇರೆಗೆ ಈ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ದೇವಾಲಯಕ್ಕೆ ಡಿಸೆಂಬರ್​ 4 ರಂದು ಮಹೀಂದ್ರಾ ಸಂಸ್ಥೆಯಿಂದ ಉಡುಗೊರೆಯಾಗಿ ನೀಡಲಾಗಿತ್ತು. ಡಿಸೆಂಬರ್ 18 ರಂದು ನಡೆದ ಮೊದಲ ಹರಾಜು ಪ್ರಕ್ರಿಯೆಯಲ್ಲಿ 15.10 ಲಕ್ಷಕ್ಕೆ ಅಮಲ್​ ಮೊಹಮ್ಮದ್ ಅಲಿ ಎಂಬುವವರು ಖರೀದಿಸಿದ್ದರು.

    ಆದರೆ ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದಲ್ಲದೇ, ಸಾರ್ವಜನಿಕವಾಗಿ ಮಾಹಿತಿ ನೀಡದೇ ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಂಬ ಆರೋಪ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿತ್ತು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. (ಏಜೆನ್ಸೀಸ್​)

    ಆರ್​ಎಸ್​ಎಸ್​ ಬಗ್ಗೆ ವೇದಿಕೆಯಲ್ಲಿ ಚರ್ಚಿಸೋಣ ಬನ್ನಿ: ವಿ.ಎಸ್​. ಉಗ್ರಪ್ಪಗೆ ಸಿ.ಟಿ.ರವಿ ಆಹ್ವಾನ

    ಶಾಕಿಂಗ್​​..! ಗಂಡ-ಹೆಂಡತಿಯನ್ನು ಕೊಂದು ತಿಂದಿದೆ ಕರಡಿ: ಸೆರೆಯಾಯ್ತು ಭೀಕರ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts