More

    ನುಗ್ಗೆಕಾಯಿ ಕೆಜಿಗೆ 400 ರೂಪಾಯಿ! ಗಗನಕ್ಕೇರುತ್ತಿದೆ ತರಕಾರಿ ಬೆಲೆ

    ಚಿಕ್ಕಮಗಳೂರು: ಪೆಟ್ರೋಲ್​, ಡೀಸೆಲ್​, ಟೊಮ್ಯಾಟೋ, ಮೊಬೈಲ್​ ರಿಚಾರ್ಜ್​… ದರ ಏರಿಕೆ ಬಿಸಿ ಬೆನ್ನಲ್ಲೇ ಗ್ರಾಹಕರಿಗೆ ಶಾಕ್​ ಕೊಟ್ಟಿದೆ ನುಗ್ಗೇಕಾಯಿ! ಚಳಿಗೆ ದೇಹ ಬೆಚ್ಚಗಿಡಲು ನುಗ್ಗೆಕಾಯಿ ತಿನ್ನೋಣ ಎಂದು ನುಗ್ಗೇಕಾಯಿಯಿಂದ ತರಹೇವಾರಿ ಅಡುಗೆ ಮಾಡೋಣ ಎಂದು ಯೋಚಿಸುವ ಮುನ್ನ ಜೇಬಲ್ಲಿ ಹಣ ಎಷ್ಟಿದೆ ಎಂದು ಲೆಕ್ಕಹಾಕಿ ಮಾರುಕಟ್ಟೆಗೆ ಹೋಗಿ… ಯಾಕಂದ್ರೆ 10ರಿಂದ 20 ರೂಪಾಯಿ ಕೊಟ್ಟರೆ ಮನೆ ಮಂದಿಗೆಲ್ಲ ಆಗುವಷ್ಟು ಸಿಗುತ್ತಿದ್ದ ನುಗ್ಗೆಕಾಯಿ ದರ ಈಗ ಗಗನಮುಖಿಯಾಗಿದೆ. ಅದೂ ನೀವು ಊಹಿಸಿರದಷ್ಟು ದರ ಹೆಚ್ಚಾಗಿದೆ!

    ಜನಸಾಮಾನ್ಯರೇನಾದರೂ ನುಗ್ಗೆಕಾಯಿ ಖರೀದಿಸಲು ಹೋದರೆ ಜೇಬು ಸುಡೋದು ಗ್ಯಾರಂಟಿ, ನುಗ್ಗೆಕಾಯಿ ಕೆ.ಜಿ.ಗೆ ಈಗ ಬರೋಬ್ಬರಿ 400 ರೂಪಾಯಿ ಇದೆ!

    ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬಹುತೇಕ ತರಕಾರಿ ಬೆಳೆಗಳು ಹಾನಿಯಾಗಿವೆ. ಸೊಪ್ಪು, ತರಕಾರಿ ಬೆಲೆ ನಾಲ್ಕು ಪಟ್ಟು ಏರಿದೆ. ಅದರಲ್ಲೂ ನುಗ್ಗೆಕಾಯಿಗೆ ಭಾರಿ ಬೇಡಿಕೆ ಇದ್ದರೂ ಸ್ಥಳಿಯವಾಗಿ ಬೆಳೆಯೇ ಇಲ್ಲ. ಡಿಸೆಂಬರ್​ನಲ್ಲಿ ಎಲ್ಲ ಅಂಗಡಿಗಳಲ್ಲಿ ಸಿಗುತ್ತಿದ್ದ ನುಗ್ಗೆಕಾಯಿ ಈಗ ಒಂದೆರಡು ಅಂಗಡಿಗಳಲ್ಲಿ ಮಾತ್ರ ಕಾಣಿಸುತ್ತಿದೆ.

    ಕಳೆದ ವರ್ಷ ಈ ಸಂದರ್ಭದಲ್ಲಿ ಕೆಜಿಗೆ 40 ರೂ. ಇದ್ದ ನುಗ್ಗೆಕಾಯಿ ಭಾನುವಾರ 10 ಪಟ್ಟು ಹೆಚ್ಚಾಗಿ ಕೆಜಿಗೆ 400 ರೂ.ಗೆ ಏರಿಕೆಯಾಗಿದೆ. ನುಗ್ಗೆಕಾಯಿ ಸಾಂಬಾರು ತಿನ್ನಲೇಬೇಕೆಂದವರು 120 ರೂ. ಕೊಟ್ಟು 300 ಗ್ರಾಂನಷ್ಟು ಖರೀದಿಸುವ ದೃಶ್ಯ ಚಿಕ್ಕಮಗಳೂರು ನಗರದಲ್ಲಿ ಭಾನುವಾರ ಕಂಡುಬಂತು. ಸ್ಥಳಿಯವಾಗಿ ಎಲ್ಲೂ ನುಗ್ಗೆಕಾಯಿ ಸಿಗದೆ ಬಹಳಷ್ಟು ಅಂಗಡಿಯವರು ಹೋಲ್​ಸೇಲ್​ ಮಾರಾಟಗಾರರಿಗೆ ಮುಂಗಡ ಹಣ ಕೊಟ್ಟು ಗುಜರಾತ್​ನಿಂದ ತರಿಸಿಕೊಳ್ಳುತ್ತಿದ್ದಾರಂತೆ.

    ಮೂವತ್ತೆಂಟು ವರ್ಷದಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ. ನುಗ್ಗೆಕಾಯಿ ಕೆಜಿಗೆ 400 ರೂ. ಆಗಿದ್ದು ಇದೇ ಮೊದಲು. ಈಗ ಎಲ್ಲೂ ಫಸಲು ಇಲ್ಲದೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆ ಏರಿಕೆಯಾಗಿದೆ. ಚೆನ್ನೆ, ಮುಂಬೈನಲ್ಲೂ ಕೊರತೆ ಇರುವುದರಿಂದ ಗುಜರಾತ್​ನಿಂದ ತರಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ತರಕಾರಿ ವ್ಯಾಪಾರಿ ಜಾಫರ್​ ಹೇಳಿದರು.

    ಕಳೆದ ವಾರ 30-40 ರೂ.ಗೆ ಕುಸಿದಿದ್ದ ಟೊಮ್ಯಾಟೊ ಬೆಲೆ ಬೆಂಗಳೂರು ಸೇರಿದಂತೆ ಹಲವೆಡೆ 100 ರಿಂದ 120 ರೂಪಾಯಿಗೆ ಏರಿಕೆಯಾಗಿದೆ.

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು: ಡೆತ್​ನೋಟ್​ನ ಜಾಡು ಹಿಡಿದು ಹೋಗುತ್ತಿದ್ದಂತೆ ಆ ಲೇಡಿಯ ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts