More

    ಸ್ವಚ್ಛತೆ ಇದ್ದಲ್ಲಿ ರೋಗ ಮುಕ್ತ ಪರಿಸರ ಸಾಧ್ಯ

    ಸೊರಬ: ಡೆಂಘೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಽಕಾರಿ ಕಚೇರಿ ಮತ್ತು ಪುರಸಭೆಯಿಂದ ಗುರುವಾರ ಪಟ್ಟಣದಲ್ಲಿ ಡೆಂಘೆ ನಿಯಂತ್ರಣ ಜಾಗೃತಿ ಜಾಥಾ ನಡೆಸಲಾಯಿತು.
    ಹಿರಿಯ ಆರೋಗ್ಯ ನಿರೀಕ್ಷಣಾಽಕಾರಿ ಶಬ್ಬೀರ್ ಖಾನ್ ಮಾತನಾಡಿ, ಡೆಂಘೆ ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ನಿರ್ಲಕ್ಷಿಸಬಾರದು. ಮಳೆಗಾಲದಲ್ಲಿ ಡೆಂಘೆ ವೇಗವಾಗಿ ಹರಡುತ್ತದೆ. ಸಾರ್ವಜನಿಕರು ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಕಸವನ್ನು ಸ್ವಚ್ಛಗೊಳಿಸುವ ಜತೆಗೆ ಡೆಂಘಿ ಹರಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
    ಪುರಸಭೆ ಮುಖ್ಯಾಽಕಾರಿ ಟಿ.ಬಾಲಚಂದ್ರ ಮಾತನಾಡಿ, ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪುರಸಭೆಯಿಂದ ನಿತ್ಯ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತದೆ. ಕಸ ಸಂಗ್ರಹಿಸುವ ವಾಹನಗಳಿಗೇ ಕಸವನ್ನು ನೀಡಬೇಕು. ಇದರಿಂದ ಪಟ್ಟಣದ ಸ್ವಚ್ಛತೆ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದೇ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ಕೂಡಲೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
    ಪುರಸಭೆ ಪರಿಸರ ಅಭಿಯಂತÀ ಚಂದನ್, ಆರೋಗ್ಯ ನಿರೀಕ್ಷಣಾಽಕಾರಿ ರಣಜಿತ್, ಸಮುದಾಯ ಆರೋಗ್ಯಾಽಕಾರಿ ಅಶ್ವಿನಿ, ಅಪೂರ್ವಾ, ಪ್ರಾಥಮಿಕ ಆರೋಗ್ಯ ಸುರಕ್ಷಾಽಕಾರಿ ಎಂ.ಸುನೀತಾ, ಆಶಾ ಮೇಲ್ವಿಚಾರಕಿ ಬಿ.ಶಿಲ್ಪಾ, ಸುಮಂಗಲಾ, ಪಾರ್ವತಿ, ನಾಗರತ್ನಾ, ಸುಮಿತ್ರಾ, ಲೀಲಾವತಿ, ಶ್ರೀಮತಿ, ಕೆರಿಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts