More

    ಬದಲಾದ ಹವಾಮಾನ, ಜೀವನಶೈಲಿಯಿಂದ ಕಾಯಿಲೆ

    ಚಿಕ್ಕಮಗಳೂರು: ಹವಾಮಾನ ವೈಪರೀತ್ಯದಿಂದಾಗಿ ಮನುಷ್ಯ ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಾನೆ. ಯಾವುದೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೃದಯ ತಜ್ಞ ಡಾ. ಅನಿಕೇತ್ ವಿಜಯ್ ಹೇಳಿದರು.
    ನಗರದ ಆಶ್ರಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಶ್ರಯ ಹೃದಯ ಸಂಸ್ಥೆಯಿಂದ ಸಖರಾಯಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಬದಲಾದ ಜೀವನ ಶೈಲಿಯು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೃದಯ ಸಂಬಂಧಿ ರೋಗಳನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಎಚ್ಚರಿಸಿದರು.
    ವೈದ್ಯರಾದ ಡಾ. ಅನಿಕೇತ್ ವಿಜಯ್, ಡಾ. ಅಶ್ವಿನಿ ಅನಿಕೇತ್, ಡಾ. ಕಾರ್ತಿಕ್ ವಿಜಯ್, ಡಾ. ಭಾಗ್ಯಾ ಕಾರ್ತಿಕ್, ಡಾ. ಶ್ರೀರಾಮ್, ಡಾ. ನಿಸರ್ಗಾ ಮತ್ತಿತರರು 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿದರು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯರೋಗ, ಸ್ತ್ರೀ ಸಂಬಂಧಿ ರೋಗಗಳ ತಪಾಸಣೆ ಮಾಡಲಾಯಿತು.
    ಕಾಲೇಜಿನ ಪ್ರಾಚಾರ್ಯ ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಪ್ರಕಾಶ್, ಆಶ್ರಯ ಆಸ್ಪತ್ರೆ ಆಹಾರ ತಜ್ಞೆ ಅನುಷಾ, ನರ್ಸಿಂಗ್ ಅಧೀಕ್ಷಕ ಲೋಕೇಶ್, ಸಹ ಸಂಯೋಜಕ ಯಶವಂತ್, ಪಿಆರ್‌ಒ ಗೆರ‌್ವಿನ್ ಡಯಾಸ್, ಪುರುಷೋತ್ತಮ್, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts