More

    ಅದ್ದೂರಿ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

    ರಬಕವಿ/ಬನಹಟ್ಟಿ : ಪಟ್ಟಣದಲ್ಲಿ ನಂ.1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ತಿಳಿಸಿದರು.
    ರಬಕವಿ ಶಂಕರಲಿಂಗ ದೇವಸ್ಥಾನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ರಬಕವಿ ಹೊಸ ಬಸ್ ನಿಲ್ದಾಣ ಎದುರಿನ ಎಂ.ವಿ. ಪಟ್ಟಣ ಮಹಾವಿದ್ಯಾಲಯದಿಂದ ನಾಡದೇವಿ ಭುವನೇಶ್ವರಿ ತಾಯಿ ತೇರಿಗೆ ಚಾಲನೆ ನೀಡಲಾಗುವುದು. ಜಾನಪದ ಕಲಾ ತಂಡಗಳು, ಜಗ್ಗಲಗಿ ವಾದ್ಯಮೇಳಗಳು ಮೆರವಣಿಗೆಗೆ ಸಾಥ್ ನೀಡಲಿವೆ. ಶಾಲೆ-ಕಾಲೇಜ್ ವಿದ್ಯಾರ್ಥಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ನೌಕರರು, ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗಹಿಸುವರು. ರಾಂಪುರ ನೀಲಕಂಠೇಶ್ವರ ಮಠದವರೆಗೆ ಮೆರವಣಿಗೆ ಸಾಗಿ ಮರಳಿ ಶಂಕರಲಿಂಗ ವೃತ್ತ ತಲುಪಿ ಅಲ್ಲಿ ಸಾಮೂಹಿಕ ನಾಡಗೀತೆ, ಸಭೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
    ಸಂಜೆ 6 ಗಂಟೆಗೆ ಶಂಕರಲಿಂಗ ವೃತ್ತದಲ್ಲಿನ ಭವ್ಯ ವೇದಿಕೆಯಲ್ಲಿ ಖ್ಯಾತ ಸಾಹಿತಿಗಳಿಂದ ಉಪನ್ಯಾಸ, ಸನ್ಮಾನ, ಪ್ರಸಿದ್ಧ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಅಂದು ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ಸ್ವಯಂಪ್ರೇರಿತವಾಗಿ ಕನ್ನಡದ ಧ್ವಜ ಕಟ್ಟಿ ಕನ್ನಡ ಪ್ರೇಮ ಮೆರೆಯಬೇಕೆಂದು ಮನವಿ ಮಾಡಿದರು.
    ಹಿರಿಯ ಸಾಹಿತಿಗಳಾದ ಎಂ. ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ, ಕಸಾಪ ತಾಲೂಕು ಅಧ್ಯಕ್ಷ ಮ. ಕೃ. ಮೇಗಾಡಿ ಜಿ.ಎಸ್. ವಡಗಾವಿ, ಎ.ಆರ್. ರಾವಳ, ಬಾಬು ಗಂಗಾವತಿ. ಬಿ. ಎಂ. ಮಟ್ಟಿಕಲ್ಲಿ, ಈರಣ್ಣ ಗುಣಕಿ, ಬಾಬು ಮಹಾಜನ್, ಸುಭಾಷ್ ಮದರಕಂಡಿ, ಸಂಗಮೇಶ ಚಿತ್ತರಗಿ, ಶಿವಾನಂದ ದಾಶಾಳ, ಪ್ರಕಾಶ ಕುಂಬಾರ, ಬಸವರಾಜ ಗುಣಕಿ, ಚಂದ್ರಶೇಖರ ಉಮದಿ, ವಿನಾಯಕ ಮಹೇಂದ್ರಕರ, ಶ್ರೀಶೈಲ ಗುಣಕಿ, ಸಾಗರ ನಿಪ್ಪಾಣಿ, ಮಹಾದೇವ ಕೋಟ್ಯಾಳ, ಯಾಸೀನ್ ಕಾರಬಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts