More

    ಗಣಿಗಾರಿಕೆ ಮಾಫಿಯಾಗೆ ಪೊಲೀಸ್​ ಅಧಿಕಾರಿ ಬಲಿ: ಟ್ರಕ್​ ಹರಿಸಿ ಡಿಸಿಪಿಯ ಭೀಕರ ಹತ್ಯೆ

    ಚಂಡಿಗಢ: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿಹಿರಿಯ ಪೊಲೀಸ್​ ಅಧಿಕಾರಿ ಮೇಲೆ ಟ್ರಕ್​ ಹರಿಸಿ ಭೀಕರ ಹತ್ಯೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಸುರೇಂದ್ರ ಸಿಂಗ್​​ ಗಣಿ ಮಾಫಿಯಾಗೆ ಬಲಿಯಾದ ಹಿರಿಯ ಪೊಲೀಸ್​ ಅಧಿಕಾರಿ. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಸುರೇಂದ್ರ ಸಿಂಗ್​ ತನ್ನ ತಂಡದೊಂದಿಗೆ ಇಂದು ಬೆಳಗ್ಗೆ 11.30ಕ್ಕೆ ಸ್ಥಳಕ್ಕೆ ತಲುಪಿದ್ದರು.

    ಪೊಲೀಸ್​ ಸಿಬ್ಬಂದಿಯನ್ನು ಕಂಡ ಕೂಡಲೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ದಾರಿಯಲ್ಲಿ ನಿಂತ ಅಧಿಕಾರಿ ಸುರೇಂದ್ರ ಸಿಂಗ್​ ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್​ ಚಾಲಕ ಆತನ ಮೇಲೆ ಟ್ರಕ್​ ಹರಿಸಿದ್ದರಿಂದ ಪೊಲೀಸ್​ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೊಪಿಗಳು ಪರಾರಿಯಾಗಿದ್ದಾರೆ.

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಆರೋಪಿಗಳನ್ನು ಪತ್ತೆ ಹಚ್ಚಲು ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

    ಇದೊಂದು ಆಘಾತಕಾರಿ ಘಟನೆಯಾಗಿದ್ದು, ಗಣಿಗಾರಿಕೆ ಮಾಫಿಯಾವನ್ನು ಬಿಡುವುದಿಲ್ಲ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಯಾರನ್ನೂ ಬಿಡುವುದಿಲ್ಲ ಎಂದು ಗೃಹ ಸಚಿವ ಅನಿಲ್​ ವಿಜ್​ ಹೇಳಿದ್ದಾರೆ.

    2009ರ ಹಿಂದಿನ ಸುಪ್ರೀಂಕೋರ್ಟ್​ ನಿಷೇಧದ ಆದೇಶದ ಹೊರತಾಗಿಯೂ ಅರಾವಳಿ ಪ್ರದೇಶದ ಹಲವಾರು ಸ್ಥಳಗಳಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದೆ. ಈ ಪ್ರದೇಶದಲ್ಲಿ 16 ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಇಲ್ಲಿನ ನಾಗರಿಕರ ಗುಂಪೊಂದು ಆರೋಪಿಸಿತ್ತು. (ಏಜೆನ್ಸೀಸ್​)

    ಕಳೆದ ಮೂರು ವರ್ಷದಲ್ಲಿ ಆನೆ ದಾಳಿಗೆ ಬಲಿಯಾದವರೆಷ್ಟು: ಸರ್ಕಾರ ನೀಡಿರುವ ವರದಿ ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts