More

    ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

    ದಾವಣಗೆರೆ: ಆಕೆ ಹುಟ್ಟಿನಿಂದ ಅಂಗವಿಕಲೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ದಟ್ಟವಾಗಿದೆ. ಆದರೆ, ದೈಹಿಕ ನ್ಯೂನತೆ ಅಡ್ಡಿಯಾಗುತ್ತಿದೆ. ಒಮ್ಮೆಯಾದರೂ ಖಾಕಿ ಉಡುಪಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಆಕೆಯ ಮಹದಾಸೆಯನ್ನು ಪೊಲೀಸ್​ ಇಲಾಖೆ ಈಡೇರಿಸಿದ್ದು, ಖಾಕಿ ತೊಟ್ಟ ಆಕೆಯ ಸಂತೋಷಕ್ಕೆ ಪಾರವೇ ಇಲ್ಲ.

    ಇಂತಹ ಅಪರೂಪದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ನ್ಯಾಯಾಲಯದ ಬಳಿ ಕಂಪ್ಯೂಟರ್​ ಟೈಪಿಂಗ್​ ಅಂಗಡಿ ಇಟ್ಟುಕೊಂಡಿರುವ, ದಾವಣಗೆರೆಯ ಕೆಟಿಜೆ ನಗರ ನಿವಾಸಿ ವಿಜಯಲಕ್ಷ್ಮೀ ಎಂಬುವರ ಪುತ್ರಿ 18 ವರ್ಷದ ಸಾಧನಾ ಮಿದುಳು ವಾತ (ಸೆರೆಬ್ರಲ್​ ಪಾಲಿಸಿ)ದಿಂದ ಬಳಲುತ್ತಿದ್ದು, ಆಕೆಯ ಸಹೋದರಿಗೂ ಅಂಗವೈಕಲ್ಯವಿದೆ.

    ಓದಿನಲ್ಲಿ ಚುರುಕಾಗಿರುವ ಸಾಧನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಗಳಿಸಿದ್ದಾಳೆ. ಈಕೆಯ ತಾಯಿ ಜಿಲ್ಲಾ ನ್ಯಾಯಾಲಯದ ಬಳಿ ಕಂಪ್ಯೂಟರ್​ ಟೈಪಿಂಗ್​ ಅಂಗಡಿ ಇಟ್ಟುಕೊಂಡಿದ್ದಾರೆ. ಸಾಧನಾಗೆ ಬಾಲ್ಯದಿಂದಲೂ ‘ಎಸ್​ಪಿ’ ಆಗಬೇಕು ಎಂಬ ಕನಸಿತ್ತು. ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಿಲ್ಲ. ಆದರೆ, ಮಗಳನ್ನು ಪೊಲೀಸ್​ ಅಧಿಕಾರಿಯ ವೇಷದಲ್ಲಿ ನೋಡಬೇಕು ಎಂಬ ಅಪೇಕ್ಷೆಯಿಂದ ವಿಜಯಲಕ್ಷ್ಮೀ ಅವರು ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಬಳಿ 1 ವರ್ಷದ ಹಿಂದೆ ಮನವಿ ಮಾಡಿದ್ದರಂತೆ.

    ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

    ತಾಯಿ-ಮಗಳ ಕನಸಿಗೆ ಗುರುವಾರ ಕಾಲ ಕೂಡಿ ಬಂದಿತ್ತು. ಪೊಲೀಸ್​ ಉಡುಪಿನಲ್ಲಿದ್ದ ಸಾಧನಾಳಿಗೆ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್​ ಅವರ ಪಕ್ಕದಲ್ಲಿ 45 ನಿಮಿಷ ಕಾಲ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ಯುವತಿ ಧರಿಸಿದ್ದ ಖಾಕಿ ಸಮವಸ್ತ್ರದಲ್ಲಿ “ಸಾಧನಾ ಎಂ.ಪಾಟೀಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಾವಣಗೆರೆ’ ಎಂದು ಬರೆದ ನೇಮ್​ ಪ್ಲೇಟ್​ ಅನ್ನೂ ಹಾಕಲಾಗಿತ್ತು. ಈ ದೃಶ್ಯವನ್ನು ತಾಯಿ ವಿಜಯಲಕ್ಷ್ಮೀ ಮತ್ತು ಸ್ನೇಹಿತರು, ಹಿತೈಷಿಗಳು ಕಣ್ತುಂಬಿಕೊಂಡರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಇದ್ದರು.

    ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

    ರ್ಯಾಂಪ್​, ಗಾಲಿ ಕುರ್ಚಿ ಸೌಲಭ್ಯ ಕಲ್ಪಿಸಿ: ಸಮವಸ್ತ್ರದಲ್ಲಿದ್ದ ಸಾಧನಾಳನ್ನು ಪೊಲೀಸ್​ ಅಧಿಕಾರಿಗಳು ಮಾತನಾಡಿಸಿದಾಗ, ಸಂಜ್ಞಾ ಭಾಷೆಯಲ್ಲಿ ಉತ್ತರಿಸಿ, ಎಸ್ಪಿ ಕಚೇರಿಯಲ್ಲಿ ಅಂಗವಿಕಲರಿಗಾಗಿ ರ್ಯಾಂಪ್​ ಮಾಡಬೇಕು, ಗಾಲಿ ಕುರ್ಚಿಯ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದಳು. ಅಲ್ಲದೆ ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು. ದೂರುಗಳನ್ನು ಬೇಗನೆ ಸ್ವೀಕರಿಸಬೇಕು. ದೇವಸ್ಥಾನ, ಪಾರ್ಕ್​ ಮುಂತಾದ ಸಾರ್ವಜನಿಕ ಸ್ಥಳಗಳಲ್ಲೂ ರ್ಯಾಂಪ್​, ಗಾಲಿ ಕುರ್ಚಿ ಇರಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದಳು.

    ನನ್ನ ಮಗಳನ್ನು ಪೊಲೀಸ್​ ಸಮವಸ್ತ್ರದಲ್ಲಿ ನೋಡಿ ಬಹಳ ಸಂತೋಷವಾಯಿತು. ಐಜಿಪಿ ಅವರು ತಮ್ಮ ಜತೆಗೆ ಕುಳಿತುಕೊಳ್ಳಲು ಆಕೆಗೆ ಅವಕಾಶ ಮಾಡಿಕೊಟ್ಟಿದ್ದು ಸ್ಮರಣೀಯ. ಮಗಳಿಗೂ ಅಷ್ಟೇ ಖುಷಿಯಾಗಿದೆ. ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.
    |ವಿಜಯಲಕ್ಷ್ಮೀ ಸಾಧನಾಳ ತಾಯಿ

    ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್​ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್​ನಲ್ಲಿದೆ ಮಹತ್ವದ ಸಾಕ್ಷ್ಯ

    ನಡುರಸ್ತೆಯಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ, ಬೆಚ್ಚಿಬಿದ್ದ ಶಿವಮೊಗ್ಗ ಜನತೆ! ಈತ ಲವ-ಕುಶ ಕೊಲೆಯ ಪ್ರಮುಖ ಆರೋಪಿ

    ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts