More

    10 ಸಾವಿರ ರೂ. ಕೊಡ್ತೀನಿ.. ನಂಗೇ ವೋಟ್​ ಹಾಕಿ… ಕೋವಿಡ್​ ಸಂತ್ರಸ್ತರಿಗೆ ಆಣೆ-ಪ್ರಮಾಣ ಮಾಡಿಸಿದ ರೇಣುಕಾಚಾರ್ಯ

    ದಾವಣಗೆರೆ: ಮುಂದಿನ ಬಾರಿ ನೀವೆಲ್ಲ ನನಗೇ ವೋಟು ಹಾಕಬೇಕು. ನಿಮ್ಮ ಊರಿನಲ್ಲಿ ಎಲ್ಲರಿಗೂ ಹೇಳಿ ಎಂದು ಕೋವಿಡ್ ಸಂತ್ರಸ್ಥರಿಂದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಣೆ ಪ್ರಮಾಣ ಮಾಡಿಸಿದ ವಿಡಿಯೋ ವೈರಲ್​ ಆಗಿದೆ.

    ಕೋವಿಡ್ ಸಂತ್ರಸ್ತರನ್ನು ಮನೆ ಬಳಿ ಕರೆಸಿಕೊಂಡ ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 1 ಲಕ್ಷ ರೂಪಾಯಿ ಕೋವಿಡ್ ಪರಿಹಾರ ನೀಡುತ್ತಿದೆ. ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನಿಮ್ಮ ಅಕೌಂಟ್‌ಗೆ ಬರುತ್ತೆ. ವೈಯಕ್ತಿಕವಾಗಿ ನಾನು ನಿಮಗೆ 10 ಸಾವಿರ ರೂಪಾಯಿ ನೀಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನಗೇ ವೋಟು ಹಾಕುವುದಾಗಿ ನೀವೆಲ್ಲ ಪ್ರಮಾಣ ಮಾಡಿ ಎಂದಿದ್ದಾರೆ.

    ಕೋವಿಡ್ ಪರಿಹಾರ ವಿತರಣೆಯಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ ರೇಣುಕಾಚಾರ್ಯರ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ಕರೊನಾ ಸಂಕಷ್ಟ ಕಾಲದಲ್ಲಿ ಕೋವಿಡ್​ ಆಸ್ಪತ್ರೆಯಲ್ಲೇ ಉಳಿದ ರೇಣುಕಾಚಾರ್ಯ ಖುದ್ದು, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದರು. ಮಹಾಮಾರಿ ಕರೊನಾ ಸೋಂಕು ತೊಲಗುವಂತೆ ಆಸ್ಪತ್ರೆಯಲ್ಲೇ ಹೋಮ-ಹವನ ಮಾಡಿಸಿದ್ದರು. ಸೋಂಕಿತರಿಗೆ ಗುಣಮಟ್ಟದ ಆಹಾರ ಸಿಗುವಂತೆ ಕಾಳಜಿ ವಹಿಸಿದ್ದು ಮಾತ್ರವಲ್ಲ, ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಿ ರಾಜ್ಯದ ಗಮನ ಸೆಳೆದಿದ್ದರು. ಇದೀಗ ಆಣೆ-ಪ್ರಮಾಣ ಮಾಡಿಸಿದ್ದನ್ನ ನೋಡಿದ ನೆಟ್ಟಿಗರು ಇದೆಲ್ಲವೂ ವೋಟಿಗಾಗಿ ಮಾಡಿದ ನಾಟಕವೇ? ಎಂದು ಪ್ರಶ್ನಿಸುತ್ತಿದ್ದಾರೆ.

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್​ ಫೋಟೋ ಮುದ್ರಿಸಿದ ಕೆಎಂಎಫ್​! ಭಾವುಕರಾದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts