More

    ಸವಿತಾ ಸಮಾಜಕ್ಕೆ ಸಮುದಾಯ ಭವನ ಅಗತ್ಯವಿದೆ

    ಪಾಂಡವಪುರ: ಶಿವನ ದಿವ್ಯಾ ದೃಷ್ಟಿಯಿಂದ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದ ರಚಿಸಿದರು ಎಂದು ಸವಿತಾ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿಧರ್ ಹೇಳಿದರು.

    ತಾಲೂಕಿನ ಕೆನ್ನಾಳು ಸಮೀಪದ ರೈಲು ನಿಲ್ದಾಣದ ಬಳಿ ಶುಕ್ರವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರದಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

    ಸವಿತಾ ಮಹರ್ಷಿ ದೇವಾನುದೇವತೆಗಳ ಸೇವೆ ಮಾಡುತ್ತಿದ್ದರು ಎಂಂದು ಪುರಾಣ ಪುಣ್ಯ ಗ್ರಂಥಗಳು ಹಾಗೂ ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮ ಮನುಷ್ಯನನ್ನು ಸೃಷ್ಟಿಸಿದರೆ, ನಾವು ಮನುಷ್ಯನಿಗೆ ಸುಂದರ ರೂಪ ಕೊಡುತ್ತೇವೆ. ಕಾಯಕ ಜೀವಿಗಳಾದ ನಮ್ಮ ಸಮಾಜಕ್ಕೆ ಸಮುದಾಯ ಭವನದ ಅವಶ್ಯಕತೆ ಇದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಜತೆಗೆ ರೈತಸಂಘದ ನಾಯಕರು ಶಾಸಕರಿಗೆ ಭವನದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು ಮಾತನಾಡಿ, ಸವಿತಾ ಮಹರ್ಷಿ ಜಯಂತಿಯನ್ನು ನಮ್ಮ ಭಾಗದಲ್ಲಿ ಆಚರಿಸುತ್ತಿರುವುದು ತುಂಬ ಸಂತಸ. ನಾವು ಸದಾಕಾಲ ಸವಿತಾ ಸಮಾಜದ ಏಳಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

    ಸಮುದಾಯದ ತಾಲೂಕು ಅಧ್ಯಕ್ಷ ಡಾಮಡಹಳ್ಳಿ ಶಿವಕುಮಾರ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ರವಿ, ಖಜಾಂಚಿ ಯೋಗೇಶ್, ಆರ್.ಕಿರಣ್ ಮುಖಂಡರಾದ ರಾಜು, ನಾಗರಾಜು, ಬಸವರಾಜು, ವೆಂಕಟೇಶ್, ನಾರಾಯಣ, ಸುರೇಶ್, ಸ್ವಾಮಿ, ಕೇಶವ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts