More

    ಚಲಿಸುತ್ತಿರುವ ರೈಲಿನಲ್ಲಿ ಯುವಕನ ಹುಚ್ಚಾಟ: ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ!

    ಹುಬ್ಬಳ್ಳಿ: ಚಲಿಸುವ ರೈಲುಗಳಲ್ಲಿ ಯುವಕರು ಸ್ಟಂಟ್​ ಮಾಡಲು ಹೋಗಿ ಕೈ ಕಾಲು ಮುರಿದುಕೊಂಡರೆ, ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಂಡಿರುವವರೂ ಇದ್ದಾರೆ. ಇಲ್ಲೂ ಸಹ ಒಬ್ಬ ಯುವಕ ಚಲಿಸುವ ರೈಲಿನಲ್ಲಿ ಸ್ಟಂಟ್​ ಮಾಡಿರುವ ಹಚ್ಚು ಸಾಹಸಕ್ಕೆ ಕೈ ಹಾಕಿದ್ದಾನೆ.

    ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ಯುವಕ ಸ್ಟಂಟ್​ ಮಾಡುತ್ತಿದ್ದ ದೃಶ್ಯವನ್ನು ಇತರೆ ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

    ಪ್ರಾಣಾವನ್ನೂ ಲೆಕ್ಕಿಸಿದೆ ಈ ಯುವಕ ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವು, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು ಹೀಗೆ ಸುಮಾರು ಹೊತ್ತು ಹುಡುಗಾಟ ಮಾಡಿದ್ದಾನೆ.

    ರೈಲು ವೇಗವಾಗಿ ಚಲಿಸುತ್ತಿದ್ದರು, ಮಾರ್ಗ ಮಧ್ಯೆದಲ್ಲಿ ಸಾಕಷ್ಟು ಪ್ರಪಾತಗಳು ಇದ್ದರೂ ಯಾವುದನ್ನೂ ಕೇರ್​ ಮಾಡದೇ ಹುಚ್ಚಾಟವನ್ನೂ ಮುಂದುವರಿಸಿದ್ದಾನೆ. ಇವನ ಅದೃಷ್ಟ ಚೆನ್ನಾಗಿತ್ತು, ಈತನ ಆಯಸ್ಸು ಗಟ್ಟಿ ಇದ್ದಿದರಿಂದ ಸದ್ಯಕ್ಕೆ ಏನೂ ಆಗಿಲ್ಲ. ಆದರೆ ಇಂತಹ ಸ್ಟಂಟ್​ಗಳು ಪ್ರಾಣಕ್ಕೆ ಸಂಚಕಾರಿಯಾಗಿವೆ. (ದಿಗ್ವಿಜಯ ನ್ಯೂಸ್​)

    ಅತ್ತೆಯನ್ನೇ ಕೊಂದ ಪಾಪಿ ಅಳಿಯ: ಚಾಕುವಿನಿಂದ ಇರಿದು ಭೀಕರ ಹತ್ಯೆ

    ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಸಿದ್ದರಾಮಯ್ಯರಿಂದ ಆರ್​ಎಸ್​ಎಸ್​ ಟೀಕೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts