More

    ಮಾನವೀಯ ಮೌಲ್ಯದ ಪುಸ್ತಕ ಸಂವಿಧಾನ

    ಬಾಳೆಹೊನ್ನೂರು: ಸಂವಿಧಾನ ಎಂದರೆ ಕೇವಲ ಕಾನೂನಿನ ಕಂತೆಯನ್ನು ಹೊಂದಿರುವ ಪುಸ್ತಕವಲ್ಲ ಅದು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಪುಸ್ತಕ ಎಂದು ಶೃಂಗೇರಿ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಎಚ್.ಎ.ಪ್ರಕಾಶ್ ಹೇಳಿದರು.
    ಪಟ್ಟಣದ ಬಿ.ಕಣಬೂರು ಗ್ರಾಪಂನಿಂದ ಕಲಾರಂಗ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಮಾನತೆ, ಸ್ವಾತಂತ್ರೃ, ನ್ಯಾಯ, ಏಕತೆ ಸಂವಿಧಾನದ ಆಶಯ. ಎಲ್ಲರಿಂದ ಎಲ್ಲರ ಉದ್ಧಾರ ಸಂವಿಧಾನದ ಪರಿಕಲ್ಪನೆ. ಶೋಷಿತರಿಗೆ ಸಮಾಜದಲ್ಲಿ ಮೀಸಲಾತಿ ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದೇ ಸಂವಿಧಾನದ ಉದ್ದೇಶ ಎಂದರು.
    ಮೀಸಲಾತಿಯಿಂದ ದೇಶ ಹಾಳಾಗುವುದಿಲ್ಲ. ಸಾಮಾನ್ಯ ವ್ಯಕ್ತಿಯೂ ಮೀಸಲಾತಿಯಿಂದ ದೇಶದ ಉನ್ನತ ಸ್ಥಾನ ಅಲಂಕರಿಸುವುದು ಇದರ ಉದ್ದೇಶ. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಆಚರಣೆ ಮಾಡಲು ಪೂರ್ಣ ಸ್ವಾತಂತ್ರೃ ನೀಡುವುದೇ ಸಂವಿಧಾನ ಎಂದರು.
    ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಎಂ.ವಿ.ಸದಾಶಿವ ಆಚಾರ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗ್ರಾಪಂ ನಿಂದ ೀ ಬಾರಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದು, ಮುಂಬರುವ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಬಸ್ ನಿಲ್ದಾಣ ಕಾಮಗಾರಿ ಶೇ.90 ಮುಕ್ತಾಯವಾಗಿದೆ. ಗ್ರಾಪಂನ ಸಭಾಂಗಣದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಶೀಘ್ರ ಮುಕ್ತಾಯಗೊಳಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts