More

    ನನ್ಗೆ ಜೆಡಿಎಸ್ ಎಲ್ಲವನ್ನೂ ಕೊಟ್ಟಿದೆ.. ನನ್ಗೇನೂ ದ್ರೋಹ ಮಾಡಿಲ್ಲ.. ಎನ್ನುತ್ತಲೇ ಜೆಡಿಎಸ್​ ತೊರೆದು ‘ಕೈ’ ಹಿಡಿದ ಬೆಮೆಲ್ ಕಾಂತರಾಜು

    ಬೆಂಗಳೂರು: ರಾಜಕೀಯ ಭವಿಷ್ಯಕ್ಕಾಗಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಎಂಎಲ್​ಸಿ ಬೆಮೆಲ್ ಕಾಂತರಾಜು ಶುಕ್ರವಾರ ಜೆಡಿಎಸ್ ತೊರೆದು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾದರು.

    ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್​. ಟಿ.ಬಿ.ಜಯಚಂದ್ರ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಬೆಮೆಲ್​ ಕಾಂತರಾಜು ಪಕ್ಷ ಸೇರ್ಪಡೆಯಾದರು. ಕಾಂಗ್ರೆಸ್​ ಭಾವುಟ ಕೊಡುವ ಮೂಲಕ ಪಕ್ಷಕ್ಕೆ ಕಾಂತರಾಜು ಅವರನ್ನ ಡಿಕೆಶಿ ಸ್ವಾಗತಿಸಿದರು. ‘ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ದೇಶಕ್ಕಾಗಿ ಏನಾದರೂ ಮಾಡಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದು ಕಾಂತರಾಜು ಹೇಳಿದರು.

    ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಜೆಡಿಎಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೇನೂ ದ್ರೋಹ ಮಾಡಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ತುರುವೇಕೆರೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ವರಿಷ್ಠರು ಇದನ್ನು ಗುರುತಿಸಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ ಎಂದು ಕಳೆದ ನಾಲ್ಕೂವರೆ ತಿಂಗಳ ಹಿಂದೆಯೇ ಕಾಂತರಾಜು ಹೇಳಿದ್ದರು. ಆ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಹಿನ್ನೆಲೆ ಕಾಂಗ್ರೆಸ್​ ಸೇರುವ ಸುಳಿವನ್ನು ಕೊಟ್ಟಿದ್ದರು.

    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ದೇವರು ಮತ್ತು ಶಾಸ್ತ್ರದಲ್ಲಿ ನಂಬಿಕೆ ಇರವುದರಿಂದ ಕಾಂತರಾಜ್ ಪಕ್ಷ ಸೇರ್ಪಡೆ ತಡವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೆ ಒಂದೊಂದು ಸಿದ್ಧಾಂತ ಇರುತ್ತದೆ. ಸಿದ್ಧಾಂತ ಇಲ್ಲ ಅಂದರೆ ಅದು ರಾಜಕೀಯ ಪಕ್ಷವೇ ಇಲ್ಲ. ಜೆಡಿಎಸ್‌ಗೆ ಸಿದ್ಧಾಂತ ಇಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಪಕ್ಷ. ದೇಶದಲ್ಲಿ ಸಿದ್ಧಾಂತ, ಕಾರ್ಯಕ್ರಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದರೆ ಅದುವೆ ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷವು ಆರ್​ಎಸ್ಎಸ್ ಮುಖವಾಡ. ಬಿಜೆಪಿಗೆ ರಾಜಕೀಯ ಸಿದ್ಧಾಂತ ಇಲ್ಲ. ದೇವರು, ಧರ್ಮ, ಭಾವನಾತ್ಮಕ ವಿಚಾರ ಇಟ್ಟು ಜನರನ್ನು ಮತಾಂಧರನ್ನಾಗಿ ಮಾಡಿ ಅವರ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಪ್ರಯತ್ನಿಸುವ ಪಕ್ಷ ಎಂದು ಟೀಕಿಸಿದರು.

    ಹಿಂದೂ ರಾಷ್ಟ್ರ ಮಾಡಬೇಕೆಂಬುದು ಬಿಜೆಪಿ ಅಜೆಂಡಾ. ಬಹುತ್ವ ಇರುವ ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಸಾಧ್ಯವಿಲ್ಲ‌. ಸಂವಿಧಾನದಲ್ಲೂ ಹೇಳಿಲ್ಲ. ಸಂವಿಧಾನದಲ್ಲಿ ಸಹಿಷ್ಣುತೆ ಪದ ಬಳಕೆ ಮಾಡಿದೆ. ಅದಕ್ಕೆ ಹೆಚ್ಚು ಪ್ರಾಧಾನ್ಯತೆ ಇರಬೇಕು. ಇದಕ್ಕೆ ವಿರುದ್ಧವಾಗಿದ್ದು ಬಿಜೆಪಿಯವರು. ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಗ್ರಾಮ ಲೆಕ್ಕಿಗರ ಹುದ್ದೆ ಭರ್ತಿಗೆ ಹಸಿರು ನಿಶಾನೆ

    ವಿಆರ್​ಎಲ್​ ಹೆಸರಲ್ಲಿ ವಂಚನೆ: ನಕಲಿ ವೆಬ್​​ಸೈಟ್​ ಸೃಷ್ಟಿಸಿ ಗ್ರಾಹಕರಿಗೆ ಮೋಸ, ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts