More

    ಅಂಗಳಕ್ಕೆ ಬಂದ ಸುಂದರ ಉರಗ

    ಕಳಸ: ಹಾವಿನ ಸಂತತಿಯಲ್ಲೇ ಸುಂದರ ಮೈಬಣ್ಣ ಮತ್ತು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್ ಹಾವನ್ನು ಕಳಸದಲ್ಲಿ ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.

    ಕಲಶೇಶ್ವರ ದೇವಸ್ಥಾನದ ಬಳಿಯ ಚಂದ್ರ ಭಟ್ ಮನೆ ಅಂಗಳದಲ್ಲಿ ಕಾಣಿಸಿಕೊಂಡಾಗ ಹಾವನ್ನು ಉರಗ ಪ್ರೇಮಿ ರಿಜ್ವಾನ್ ಅವರನ್ನು ಕರೆಸಿ ಸೆರೆ ಹಿಡಿದರು.
    ದೇಹದ ಮೇಲೆ ಬಿದ್ದ ನೀರನ್ನು ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದಾಗಿದೆ. ಇಂಥ ಹಾವುಗಳು ಹೆಚ್ಚಾಗಿ ಬಿದಿರಿನ ಬೊಂಬಿನಲ್ಲಿ ವಾಸವಿರುವುದರಿಂದ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ, ಜ್ಞಾನ ತಪ್ಪುತ್ತಾರೆ. ಔಷಧೋಪಚಾರ ಮಾಡಿಕೊಳ್ಳದಿದ್ದರೆ ಹಾವು ಕಡಿದ ಸ್ಥಳದಿಂದ ಕೊಳೆತು ದೇಹಪೂರ್ಣ ಕೊಳೆಯುವ ಸಾಧ್ಯತೆ ಇರುತ್ತದೆ.
    ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುವ ಈ ಹಾವು, ಸ್ಥಳೀಯವಾಗಿ ಹಸಿರು ಕಂದಡಿ ಎಂದು ಕರೆಯಲಾಗುತ್ತದೆ. ಹೆಣ್ಣು ಹಾವು ಹಸಿರು ಬಣ್ಣದಲ್ಲಿ ಕಂಡು ಬಂದರೆ, ಗಂಡು ಹಾವು ಕಂದು ಬಣ್ಣದಲ್ಲಿ ಇರುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ಸಮಯದಲ್ಲಿ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಈ ಸಮಯದಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts