More

    ಬಸ್​ ನಿಲ್ದಾಣ ಸಮೀಪದ ಹಳ್ಳದಲ್ಲಿ 7 ಭ್ರೂಣಗಳು ಪತ್ತೆ! ಪ್ಲಾಸ್ಟಿಕ್​ ಡಬ್ಬಿಯಲ್ಲಿ ಕಸದಂತೆ ತುಂಬಿ ಎಸೆದ ಕಟುಕರು

    ಮೂಡಲಗಿ: ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಹಳ್ಳವೊಂದರಲ್ಲಿ ಶುಕ್ರವಾರ ಸತ್ತ 7 ಮಕ್ಕಳ ಭ್ರೂಣಗಳು ‍‍ಪತ್ತೆಯಾಗಿವೆ. ಹಳ್ಳದ ನೀರಲ್ಲಿ ಬಟ್ಟೆ ತೊಳೆಯಲು ಬಂದ ಜನರು ಪ್ಲಾಸ್ಟಿಕ್‌ ಡಬ್ಬಗಳಲ್ಲಿದ್ದ ಭ್ರೂಣಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುದ ತಕ್ಷಣ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಜನ ಸೇರಿದರು.

    ಪಟ್ಟಣದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಹಳ್ಳದಲ್ಲಿ ಭ್ರೂಣಗಳನ್ನು ಎಸೆಯಲಾಗಿದೆ. ಐದು ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಒಟ್ಟು 7 ಭ್ರೂಣಗಳನ್ನು ಒತ್ತೊತ್ತಾಗಿ ತುರುಕಲಾಗಿದೆ. 5ರಿಂದ 7 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಿ ಕೊಂದು ಅವುಗಳನ್ನು ಡಬ್ಬಗಳಲ್ಲಿ ತುಂಬಿ ಎಸೆಯಲಾಗಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದರು. ಭ್ರೂಣಗಳನ್ನು ಸದ್ಯ ಮೂಡಲಗಿ ತಾಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ.

    ತನಿಖೆಗೆ ತಂಡ ರಚನೆ: ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ಪತ್ತೆಯಾದ ಭ್ರೂಣಗಳು ಗರ್ಭಪಾತ ಮಾಡಿ ತೆಗೆದವು. ಭ್ರೂಣಲಿಂಗ ಪತ್ತೆ ಮಾಡಿದ ನಂತರ ಇಂಥ ಕೃತ್ಯ ಎಸಗಿದ್ದಾರೆ. ತಕ್ಷಣಕ್ಕೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಭ್ರೂಣಗಳನ್ನು ಏಕೆ ಹತ್ಯೆ ಮಾಡಲಾಗಿದೆ? ಎಲ್ಲಿಂದ ತರಲಾಗಿದೆ? ಯಾವಾಗ ಹಳ್ಳಕ್ಕೆ ಎಸೆಯಲಾಗಿದೆ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

    ಈ ಭ್ರೂಣಗಳಲ್ಲಿ ಕೆಲವು ಐದು ತಿಂಗಳು ತುಂಬಿವೆ, ಮತ್ತೆ ಕೆಲವು ಏಳು ತಿಂಗಳಾಗಿವೆ. ಮೂಡಲಗಿ ಠಾಣೆಯಲ್ಲಿ ಕೇಸ್‌ ದಾಖಲಿಸುವ ಪ್ರಕ್ರಿಯೆ ಮುಗಿಸಿದ ನಂತರ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುವುದು. ಪರೀಕ್ಷೆಯ ನಂತರ ಪೂರ್ಣ ಪ್ರಮಾಣದ ಸಂಗತಿ ಗೊತ್ತಾಗಲಿದೆ ಎಂದು ಡಾ.ಮಹೇಶ ಕೋಣಿ ತಿಳಿಸಿದರು.

    ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

    ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts