More

    ಲಾಕ್​ಡೌನ್​ ಕಂಟಕ: ಊರು ತಲುಪುವ ಮುನ್ನವೇ ಬಸ್ ನಿಲ್ದಾಣದಲ್ಲಿ ಪ್ರಾಣಬಿಟ್ಟ ವೃದ್ಧ

    ಹಾಸನ: ಕರೊನಾ ಲಾಕ್‌ಡೌನ್‌ನಿಂದ ಸಮಯಕ್ಕೆ ಸರಿಯಾಗಿ ಊಟ ಸಿಗದೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ಮೂಲದ ವೃದ್ಧರೊಬ್ಬರು ಬುಧವಾರ ಬೆಳಗ್ಗೆ ಬೇಲೂರಿನ ಬಸ್​ ನಿಲ್ದಾಣದಲ್ಲಿ ಕೊನೆಯುಸಿರೆಳೆದಿದ್ದಾರೆ.

    ಶಿವಮೊಗ್ಗ ಜಿಲ್ಲೆ ಚನ್ನಗಿರಿಯ ಚನ್ನೇಗೌಡ (70) ಮೃತರು. ಗಾರೆ ಕೆಲಸ ಮಾಡಿಕೊಂಡು 25 ವರ್ಷದಿಂದ ಬೇಲೂರು ತಾಲೂಕಿನ ಹಗರೆಯಲ್ಲಿ ಜೀವನ ಮಾಡುತ್ತಿದ್ದರು. ಕರೊನಾ ಹಿನ್ನೆಲೆ ಕೆಲಸವಿಲ್ಲದೆ ಪರಿಚಯಸ್ಥರ ಮನೆಯಲ್ಲಿ ಊಟ-ತಿಂಡಿ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದರು. ವಯೋಸಹಜ ಕಾಯಿಲೆಯೂ ವಿಪರೀತವಾಗಿ ಕಾಡಿತ್ತು. ಹೀಗಾಗಿ ಇಷ್ಟು ದಿನ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದವರು ಮೂರು ದಿನಗಳ ಹಿಂದಷ್ಟೆ ಊರಿಗೆ ಹೋಗುವಂತೆ ವೃದ್ಧನಿಗೆ ನಿರ್ದೇಶನ ನೀಡಿದ್ದರು.

    ಇಂತಹ ಸಂದರ್ಭದಲ್ಲಿ ಹುಟ್ಟೂರು ತಲುಪಲು ಮನಸ್ಸು ಮಾಡದ ಚನ್ನೇಗೌಡ ಪ್ರಶಸ್ತ ಎನಿಸಿದ ಸ್ಥಳದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಊರಿಗೆ ಹೋಗಲು ಗ್ರಾಮ ಪಂಚಾಯಿತಿ ಸದಸ್ಯ ರಾಜಯ್ಯ ಬುಧವಾರ ಬೆಳಗ್ಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು. ಇನ್ನಾದರೂ ಊರು ತಲುಪೋಣ ಎಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ಚನ್ನೇಗೌಡ ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

    ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts