More

    ನೀಲಂ ಕಣಿವೆಯಲ್ಲಿ ವಿಪರೀತ ಹಿಮಪಾತ: ಬರೋಬ್ಬರಿ 18 ತಾಸುಗಳ ಕಾಲ ಹಿಮದಡಿ ಸಿಲುಕಿದ್ದ 12 ವರ್ಷದ ಬಾಲಕಿ, ರಕ್ಷಣಾ ತಂಡಕ್ಕೆ ಕಾದಿತ್ತು ಅಚ್ಚರಿ

    ನೀಲಂ ಕಣಿವೆ: ಕಾಶ್ಮಿರದಲ್ಲಿ ಭರ್ಜರಿ ಹಿಮಪಾತವಾಗುತ್ತಿದ್ದು ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರು ಸೇರಿ ಸ್ಥಳೀಯರು ಹಲವು ಮಂದಿ ಹಿಮದಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

    ಹೀಗಿರುವ 12 ವರ್ಷದ ಬಾಲಕಿಯೊಬ್ಬಳು ಬರೋಬ್ಬರಿ 18 ತಾಸುಗಳ ಕಾಲ ಹಿಮಸಮಾಧಿಯಾಗಿದ್ದರೂ ಪವಾಡಸದೃಶವಾಗಿ ಬದುಕಿಬಂದ ಅಚ್ಚರಿಯ ಘಟನೆ ನಡೆದಿದೆ.

    ಬಾಲಕಿ ಸಮೀನಾ ಬೀಬಿ ಹಿಮದಡಿಯಲ್ಲಿಯೇ 18 ತಾಸು ಇದ್ದಳು. ಆಕೆ ಬದುಕಿರುವ ಬಗ್ಗೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಆದರೆ ಅದೃಷ್ಟವಶಾತ್​ ಹೆಚ್ಚೇನೂ ಅಪಾಯವಾಗದೆ ಬದುಕಿ ಬಂದಿದ್ದು ಪಾಲಕರಿಗೆ ಸಂತೋಷ ಮೂಡಿಸಿದೆ.

    ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಮೂರಂತಸ್ತಿನ ಕಟ್ಟಡದಲ್ಲಿ ಸಮೀನಾ ಬೀಬಿ ಕುಟುಂಬ ವಾಸವಾಗಿತ್ತು. ಮಂಗಳವಾರ ಉಂಟಾದ ವಿಪರೀತ ಹಿಮಪಾತದಿಂದ ಈ ಮನೆ ಸಂಪೂರ್ಣವಾಗಿ ಹಿಮಾಚ್ಛಾದಿತವಾಗಿತ್ತು. ಬಾಲಕಿಯ ಪಾಲಕರನ್ನು ರಕ್ಷಣಾ ಸಿಬ್ಬಂದಿ ಕಾಪಾಡಿದ್ದರು. ಆದರೆ ಈ ಬಾಲಕಿಯನ್ನು ಅಲ್ಲಿಂದ ಹೊರತೆಗೆಯಲು ಸ್ವಲ್ಪ ತಡವಾಯಿತು.

    ಕೊನೆಗೂ ವಿಪತ್ತು ನಿರ್ವಹಣಾ ತಂಡದವರು ಬಾಲಕಿಯನ್ನು ಪತ್ತೆ ಮಾಡಿದಾಗ ಆಕೆ ಇನ್ನೂ ಉಸಿರಾಡುತ್ತಿದ್ದಳು. ಕಾಲು ಫ್ರಾಕ್ಚರ್​ ಆಗಿತ್ತು ಮತ್ತು ಬಾಯಿಂದ ರಕ್ತ ಜಿನುಗುತ್ತಿತ್ತು. ತಕ್ಷಣವೇ ಅವಳನ್ನು ಮುಜಾಫರ್​ಬಾದ್​ ಆಸ್ಪತ್ರೆಗೆ ಸೇರಿಸಲಾಯಿತು. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

    ಆದರೆ ಈ ದುರಂತದಲ್ಲಿ ಸಮೀನಾ ಅವರ ಸೋದರ ಮತ್ತು ಸೋದರಿ ಮೃತಪಟ್ಟಿದ್ದಾರೆ. ಸಮೀನಾ ಬದುಕಿಬಂದಿದ್ದು ಒಂದು ಪವಾಡ ಎಂದು ಆಕೆಯ ತಾಯಿ ಹೇಳಿದ್ದಾರೆ.

    ನೀಲಂ ವ್ಯಾಲಿ ಸೇರಿ ಪಿಒಕೆಯ ಹಲವು ಪ್ರದೇಶಗಳಲ್ಲಿ ಸಿಕ್ಕಾಪಟೆ ಹಿಮಪಾತ ಆಗುತ್ತಿದೆ. ಈಗಾಗಲೇ ಹಲವು ಮನೆಗಳು ಹಿಮದಡಿ ಸಿಲುಕಿವೆ. ನೀಲಂ ಕಣಿವೆಯಲ್ಲಿ ಇದುವರೆಗೆ ಸುಮಾರು 76 ಮಂದಿ ಮೃತಪಟ್ಟಿದ್ದಾರೆ. ಬಲೂಚಿಸ್ತಾನದಲ್ಲಿ 31 ಹಾಗೂ ಸಿಲಾಕೋಟ್​ನಲ್ಲಿ 7 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts