ಬೆಂಗಳೂರಿನ ವಿಪ್ರೋ ಮ್ಯಾರಥಾನ್‌: ಬುಗಾಥಾ ಶ್ರೀನು, ಭಾಗೀರಥಿ ಚಾಂಪಿಯನ್‌

ಪ್ರತಿಷ್ಠಿತ ಮ್ಯಾರಥಾನ್‌ನ 13ನೇ ಆವೃತ್ತಿಯಲ್ಲಿ 45,000ಕ್ಕೂ ಹೆಚ್ಚು ಓಟಗಾರರ ಭಾಗಿ
ಬೆಂಗಳೂರಿನ ವಿಪ್ರೋ ಮ್ಯಾರಥಾನ್‌: ಬುಗಾಥಾ ಶ್ರೀನು, ಭಾಗೀರಥಿ ಚಾಂಪಿಯನ್‌
Published on: 

ಬೆಂಗಳೂರು: ಬೆಂಗಳೂರಿನ ರಸ್ತೆಗಳು ಭಾನುವಾರ ಮುಂಜಾನೆ ಸಾವಿರಾರು ಓಟಗಾರರಿಂದ ಕಂಗೊಳಿಸಿದವು. ವಿಪ್ರೋ ಬೆಂಗಳೂರು ಮ್ಯಾರಥಾನ್‌ನ 13ನೇ ಆವೃತ್ತಿಯಲ್ಲಿ45,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ನಗರದ ಪ್ರಮುಖ ಕ್ರೀಡಾ ಹಾಗೂ ಸಮುದಾಯಿಕ ಕಾರ್ಯಕ್ರಮಗಳಲ್ಲಿಒಂದಾಗಿರುವ ಈ ಮ್ಯಾರಥಾನ್‌ಅನ್ನು ಎನ್‌ಇಬಿ ಸ್ಪೋರ್ಟ್ಸ್, ಕರ್ನಾಟಕ ಅಥ್ಲೆಟಿಕ್ಸ್‌ ಅಸೋಸಿಯೇಷನ್‌, ವಿಪ್ರೋ ಬೆಂಗಳೂರು ಮತ್ತು ಶ್ರೀರಾಮ್‌ ಪ್ರಾಪರ್ಟೀಸ್‌ ಸಹಯೋಗದಲ್ಲಿಆಯೋಜಿಸಲಾಗಿತ್ತು.

ಪೂರ್ಣ ಮ್ಯಾರಥಾನ್‌, ಹಾಫ್‌ ಮ್ಯಾರಥಾನ್‌, 10ಕೆ ಮತ್ತು 5ಕೆ ವಿಭಾಗಗಳಲ್ಲಿಸ್ಪರ್ಧೆಗಳು ನಡೆದವು. ಈ ಬಾರಿ ದೇಶದ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಎಲೈಟ್‌ ಓಟಗಾರರು ಪಾಲ್ಗೊಂಡಿದ್ದರು. ವಿಶ್ವದ ಟಾಪ್‌ 50 ಮ್ಯಾರಥಾನ್‌ಗಳಲ್ಲಿಒಂದಾಗಿ ಗುರುತಿಸಿಕೊಂಡಿರುವ ಮತ್ತು ಭಾರತದಲ್ಲಿಎರಡನೇ ಸ್ಥಾನದಲ್ಲಿರುವ ವಿಪ್ರೋ ಬೆಂಗಳೂರು ಮ್ಯಾರಥಾನ್‌ನಲ್ಲಿಅನುಭವಿ ಕ್ರೀಡಾಪಟುಗಳು, ಮೊದಲ ಬಾರಿಗೆ ಓಟದಲ್ಲಿಭಾಗವಹಿಸಿದವರು, ಕಾರ್ಪೊರೇಟ್‌ ಉದ್ಯೋಗಿಗಳು, ರಕ್ಷ ಣಾ ಸಿಬ್ಬಂದಿ, ಹಿರಿಯ ನಾಗರಿಕರು ಹಾಗೂ ಯುವ ಓಟಗಾರರು ಸೇರಿದಂತೆ ವಿವಿಧ ವರ್ಗಗಳ ಜನರು ಪಾಲ್ಗೊಂಡರು.

ಪೂರ್ಣ ಮ್ಯಾರಥಾನ್‌ ಬೆಳಗ್ಗೆ 3.50ಕ್ಕೆ, ಹಾಫ್‌ ಮ್ಯಾರಥಾನ್‌ ಬೆಳಗ್ಗೆ 6ಕ್ಕೆ, 10ಕೆ ಓಟ ಬೆಳಗ್ಗೆ 7.30ಕ್ಕೆ ಹಾಗೂ 5ಕೆ ಓಟ ಬೆಳಗ್ಗೆ 8.15ಕ್ಕೆ ಆರಂಭವಾಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

ವಿಪ್ರೋ ಲಿಮಿಟೆಡ್‌ನ ಜಾಗತಿಕ ಮುಖ್ಯ ಮಾರುಕಟ್ಟೆ ಅಧಿಕಾರಿ ರಂಜಿತಾ ಘೋಷ್‌ ಮತ್ತು ಎನ್‌ಇಬಿ ಸ್ಪೋರ್ಟ್ಸ್ನ ಸಿಎಂಡಿ ನಾಗರಾಜ್‌ ಆಡಿಗಾ ಅವರು ಪೂರ್ಣ ಮ್ಯಾರಥಾನ್‌ಗೆ ಚಾಲನೆ ನೀಡಿದರು.

ಹಾಫ್‌ ಮ್ಯಾರಥಾನ್‌ಗೆ ಫಿಟ್ನೆಸ್‌ ತಾರೆ ಮಂದಿರಾ ಬೇಡಿ, ಆಂಥ್ರೋಪಿಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಷ್‌, ವಿಪ್ರೋ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್‌ ಜೈನ್‌, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್‌.ಎ. ಹ್ಯಾರಿಸ್‌, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ವಿ. ರಾಮ್‌ ಪ್ರಸಾದ್‌ ಮನೋಹರ್‌(ಐಎಎಸ್‌) ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಅನುಚೇತ್‌ (ಐಪಿಎಸ್‌) ಚಾಲನೆ ನೀಡಿದರು.

10ಕೆ ಓಟಕ್ಕೆ ಸಂಸದ ತೇಜಸ್ವಿ ಸೂರ್ಯ, ವಿಪ್ರೋ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಅಪರ್ಣಾ ಅಯ್ಯರ್‌ ಹಾಗೂ ಇತರ ಗಣ್ಯರು ಚಾಲನೆ ನೀಡಿದರು. ಪೂರ್ಣ ಮ್ಯಾರಥಾನ್‌ ಮತ್ತು ಹಾಫ್‌ ಮ್ಯಾರಥಾನ್‌ ಮಾರ್ಗಗಳು ವಿಧಾನಸೌಧ ಮತ್ತು ಕಬ್ಬನ್‌ ಪಾರ್ಕ್‌ ಸೇರಿದಂತೆ ಬೆಂಗಳೂರಿನ ಪ್ರಮುಖ ಸ್ಥಳಗಳ ಮೂಲಕ ಸಾಗಿದವು. ಈ ವರ್ಷ ಎರಡೂ ವಿಭಾಗಗಳ ಮಾರ್ಗದಲ್ಲಿಹಲಸೂರು ಕೆರೆಯನ್ನೂ ಸೇರಿಸಲಾಗಿತ್ತು.

ಫುಲ್‌ ಮ್ಯಾರಥಾನ್‌: ಬುಗಾಥಾ ಶ್ರೀನು, ಭಾಗೀರಥಿ ಚಾಂಪಿಯನ್‌

ಫುಲ್‌(ಪೂರ್ಣ) ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿಬುಗಾಥಾ ಶ್ರೀನು 2 ಗಂಟೆ 22 ನಿಮಿಷ 53 ಸೆಕೆಂಡ್‌ಗಳಲ್ಲಿಮೊದಲಿಗರಾಗಿ ಗುರಿ ತಲುಪಿ ಪ್ರಶಸ್ತಿ ಗೆದ್ದರೆ, ಮಹಿಳೆಯರ ವಿಭಾಗದಲ್ಲಿಭಾಗೀರಥಿ 3 ಗಂಟೆ 18 ಸೆಕೆಂಡ್‌ಗಳಲ್ಲಿಓಟ ಪೂರ್ಣಗೊಳಿಸಿ ಅಗ್ರಸ್ಥಾನ ಪಡೆದರು.ಎಲೈಟ್‌ ಪುರುಷರ ವಿಭಾಗದ ವೇದಿಕೆಯಲ್ಲಿಭಾರತೀಯ ಸೇನೆಯ ಓಟಗಾರರು ಪ್ರಾಬಲ್ಯ ಮೆರೆದರು. ಆಂಧ್ರಪ್ರದೇಶ ಮೂಲದ ಹಾಗೂ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿಕರ್ತವ್ಯ ನಿರ್ವಹಿಸುತ್ತಿರುವ 34 ವರ್ಷದ ಬುಗಾಥಾ ಶ್ರೀನು ಕಳೆದ 12 ವರ್ಷಗಳಿಂದ ಸ್ಪರ್ಧಾತ್ಮಕ ಓಟದಲ್ಲಿತೊಡಗಿಸಿಕೊಂಡಿದ್ದಾರೆ.

‘‘ನಾನು ಕಳೆದ 12 ವರ್ಷಗಳಿಂದ ಓಟದಲ್ಲಿಭಾಗವಹಿಸುತ್ತಿದ್ದೇನೆ. ಈ ಗೆಲುವು ನನಗೆ ನಿಜಕ್ಕೂ ವಿಶೇಷವಾಗಿದೆ. ಮಾರ್ಗದುದ್ದಕ್ಕೂ ದೊರೆತ ಜನರ ಪ್ರೋತ್ಸಾಹ ಮತ್ತು ಉತ್ತಮ ಆಯೋಜನೆ ಇಂದು ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನೆರವಾಯಿತು,’’ ಎಂದು ಅವರು ಹೇಳಿದರು. ಕರ್ನಾಟಕದ ಬೆಳಗಾವಿ ಮೂಲದ ಅಮಿತ್‌ ಪಾಟೀಲ್‌ ದ್ವಿತೀಯ ಸ್ಥಾನ ಪಡೆದರು. ಅವರು ಈ ವರ್ಷ ವೈಯಕ್ತಿಕ ಅತ್ಯುತ್ತಮ ಸಮಯ ದಾಖಲಿಸಿದರು. ಓಟದ ಆಯೋಜನೆ ಮತ್ತು ಮಾರ್ಗದುದ್ದಕ್ಕೂ ದೊರೆತ ಬೆಂಬಲ ಅತ್ಯುತ್ತಮವಾಗಿತ್ತು ಎಂದು ಅವರು ಹೇಳಿದರು.

ಎಲೈಟ್‌ ಮಹಿಳೆಯರ ವಿಭಾಗದಲ್ಲಿಉತ್ತರಾಖಂಡದ 21 ವರ್ಷದ ಮೀನಾಕ್ಷಿ ನೇಗಿ ದ್ವಿತೀಯ ಸ್ಥಾನ ಗಳಿಸಿದರು. ‘‘21ನೇ ವಯಸ್ಸಿನಲ್ಲಿಇಷ್ಟು ಅನುಭವಿ ಓಟಗಾರರ ನಡುವೆ ವೇದಿಕೆ ಹಂಚಿಕೊಳ್ಳುವುದು ದೊಡ್ಡ ಆತ್ಮವಿಶ್ವಾಸ ನೀಡಿದೆ. ಬೆಂಗಳೂರಿನ ಮಾರ್ಗ ಮತ್ತು ಜನರ ಪ್ರೋತ್ಸಾಹ ಈ ಓಟವನ್ನು ಸ್ಮರಣೀಯವಾಗಿಸಿದೆ,’’ ಎಂದು ಅವರು ಹೇಳಿದರು. 10ಕೆ ವಿಭಾಗದಲ್ಲೂಯುವ ಪ್ರತಿಭೆಗಳು ಗಮನ ಸೆಳೆದವು. ಮೂರನೇ ಸ್ಥಾನ ಪಡೆದ ಕೌಶಿಕ್‌ ನಾಯಕ್‌ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ವೇಗವಾಗಿ ಓಡಿದವರಲ್ಲಿಒಬ್ಬರಾಗಿದ್ದರು.

ಹಾಫ್‌ ಮ್ಯಾರಥಾನ್‌: ಅಂಕಿತ್‌ ಗುಪ್ತಾ, ಸುಗಂಧಾ ಶರ್ಮಾಗೆ ಪ್ರಶಸ್ತಿ

ಹಾಫ್‌ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿಅಂಕಿತ್‌ ಗುಪ್ತಾ 1 ಗಂಟೆ 9 ನಿಮಿಷ 12 ಸೆಕೆಂಡ್‌ಗಳಲ್ಲಿಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿಸುಗಂಧಾ ಶರ್ಮಾ 1 ಗಂಟೆ 34 ನಿಮಿಷ 55 ಸೆಕೆಂಡ್‌ಗಳಲ್ಲಿಓಟ ಪೂರ್ಣಗೊಳಿಸಿ ಗೆಲುವು ಸಾಧಿಸಿದರು. 10ಕೆ ಓಟದ ಪುರುಷರ ವಿಭಾಗದಲ್ಲಿಲಕ್ಷ್ಮೀಶ ಸಿ.ಎಸ್‌. 33 ನಿಮಿಷ 54 ಸೆಕೆಂಡ್‌ಗಳಲ್ಲಿಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿಎಲಿನಾ ಭಟ್‌ 52 ನಿಮಿಷ 7 ಸೆಕೆಂಡ್‌ಗಳಲ್ಲಿಗುರಿ ತಲುಪಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net