ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಸೌದಿ ಅರೇಬಿಯಾಗೆ ‘ಹಾರಾಡುವವರಿಗೆ’ ಸದ್ಯ ನಿರ್ಬಂಧ ವಿಧಿಸಲಾಗಿದೆ. ಅರ್ಥಾತ್, ಸೌದಿ-ಭಾರತ ಮಧ್ಯೆ ವಿಮಾನ ಪ್ರಯಾಣಕ್ಕೆ ಮಂಗಳವಾರದಿಂದಲೇ ನಿಷೇಧ ಹೇರಲಾಗಿದೆ.
ಭಾರತ ಸೇರಿ ಹಲವೆಡೆ ಕರೊನಾ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸೌದಿ ಅರೇಬಿಯಾದ ವೈಮಾನಿಕ ಪ್ರಾಧಿಕಾರ ಆದೇಶ ಹೊರಡಿಸಿದೆ.
ಸೌದಿಯಿಂದ ಭಾರತ, ಬ್ರೆಜಿಲ್ ಹಾಗೂ ಅರ್ಜೆಂಟೀನಾಗಳಿಗೆ ಬರುವ-ಹೋಗುವ ವಿಮಾನಗಳನ್ನು ನಿಷೇಧಿಸಲಾಗಿದೆ. ಆದರೆ ಸರ್ಕಾರಿ ಆಹ್ವಾನ ಇರುವ ಪ್ರಯಾಣಿಕರಿಗೆ ವಿನಾಯಿತಿ ಇದೆ ಎಂದು ಅದು ಹೇಳಿದೆ. (ಏಜೆನ್ಸೀಸ್)