ಬೆಂಗಳೂರು: ರಾಜ್ಯಕ್ಕೆ ಕರೊನಾ ಬಿಗ್ ಶಾಕ್ ನೀಡಿದೆ. ಇಷ್ಟು ದಿನ ಐದುಸಾವಿರದ ಆಸುಪಾಸಿನಲ್ಲಿದ್ದ ಕರೊನಾ ಪ್ರಕರಣದ ಇಂದು ಮತ್ತೂ ಅಧಿಕವಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6128 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
24ಗಂಟೆಯಲ್ಲಿ 3793 ಮಂದಿ ಸೋಂಕಿನಿಂದ ಪಾರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ 83 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದೆ.
ಕೊವಿಡ್-19 ಸಕ್ರಿಯ ಪ್ರಕರಣಗಳು 69,700 ಹಾಗೂ ಸಾವನ್ನಪ್ಪಿದವರು 2230 ಮಂದಿ. ಡಿಸ್ಚಾರ್ಜ್ ಆದವರು 46,694 ಜನರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಯಾವ ಜಿಲ್ಲೆಗಳಲ್ಲಿ ಎಷ್ಟು ಕೊವಿಡ್-19 ಪ್ರಕರಣ ಪತ್ತೆಯಾಗಿದೆ? ಮೃತಪಟ್ಟವರು ಎಷ್ಟು? ಇಲ್ಲಿದೆ ನೋಡಿ ಲಿಸ್ಟ್