ನವದೆಹಲಿ/ಬೀಜಿಂಗ್: ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಮಡಿದ ತನ್ನ ಯೋಧರ ಕುಟುಂಬ ವರ್ಗದವರನ್ನು ಸಂತೈಸಲು ಚೀನಾ ಇದೀಗ ಮುಂದಾಗಿದೆ. ಅದರೂ ಘರ್ಷಣೆಯಲ್ಲಿ ಮಡಿದ ತನ್ನ ಯೋಧರ ನಿಖರ ಲೆಕ್ಕವನ್ನು ಕೊಡಲು ಅದು ನಿರಾಕರಿಸಿದೆ.
ಮಡಿದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರಿಗೆ ಯಾವುದೇ ರೀತಿಯ ಗೌರವಾರ್ಪಣೆ ಮಾಡದಿರುವ ಬಗ್ಗೆ ಚೀನಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ. ಈ ಬಗ್ಗೆ ಯೋಧರ ಕುಟುಂಬ ವರ್ಗದವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ತುಣುಕು ಬಹಿರಂಗಗೊಂಡ ಎರಡು ದಿನಗಳ ನಂತರದಲ್ಲಿ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಈ ಬಗ್ಗೆ ಸಂಪಾದಕೀಯ ಪ್ರಕಟವಾಗಿದೆ.
ಮಡಿದ ಯೋಧರ ಅಂತ್ಯಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ಮಾಡಲಾಗಿದೆ. ಈ ಘರ್ಷಣೆಯಲ್ಲಿ ಮಡಿದ ಯೋಧರು ಎಷ್ಟು, ಯಾರೆಂಬ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಿ, ಅವರೆಲ್ಲರಿಗೂ ಗೌರವಾರ್ಪಣೆ ಮಾಡಲಾಗುವುದು ಎಂದು ಹ್ಯು ಕ್ಸಿಜಿನ್ ಸಂಪಾದಕೀಯದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…
ಈ ಘರ್ಷಣೆಯಲ್ಲಿ ಪಿಎಲ್ಎನ 20ಕ್ಕಿಂತ ಕಡಿಮೆ ಯೋಧರು ಮಡಿದಿರುವುದಾಗಿ ಸರ್ಕಾರ ನೀಡುತ್ತಿರುವ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.
ಭಾರತೀಯ ಮಾಧ್ಯಮಗಳಲ್ಲಿ ಪಿಎಲ್ಎನ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ. ಭಾರತೀಯ ಯೋಧರೇ 16 ಶವಗಳನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ಮಾಡಿರುವ ವರದಿಯನ್ನು ತಳ್ಳಿಹಾಕಿರುವ ಅವರು, ಇದು ಯಾವುದೂ ನಂಬಲರ್ಹ ಮಾಹಿತಿಯಲ್ಲ ಎಂದು ಹೇಳಿದ್ದಾರೆ.
ಆ್ಯಪ್ ಮೂಲಕ ಟಿ.ವಿ ಚಾನೆಲ್ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್ ನ್ಯೂಸ್