More

    ಭಜನೆಯಿಂದ ಪ್ರತಿಯೊಂದೂ ಮನಸ್ಸು, ಮನೆಯಲ್ಲಿ ದೇವರು ನೆಲೆಸಲು ಸಾಧ್ಯ

    ಕಡೂರು: ಭಜನೆ ಎಂಬುದು ವಿಕೃತ ಮನಸ್ಸನ್ನು ಪ್ರಕೃತಿ ಕಡೆಗೆ ಕೊಂಡೊಯ್ಯುತ್ತದೆ ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಬೀರೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಮಲ್ಲೇಶ್ವರ ಶ್ರೀ ಸ್ವರ್ಣಾಂಬಾ ದೇವಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಭಜನೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಭಜನೆಯಿಂದ ಪ್ರತಿಯೊಂದೂ ಮನಸ್ಸು ಮತ್ತು ಮನೆಯಲ್ಲಿ ದೇವರು ನೆಲೆಸಲು ಸಾಧ್ಯ. ಸಾಮರಸ್ಯದ ಬದುಕಿಗೆ ಭಜನೆ ಬೆಳಕಾಗಿದೆ. ನಮ್ಮೊಳಗಿನ ಶಕ್ತಿ ಗೋಚರವಾಗುತ್ತದೆ. ಸನಾತನ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಿದೆ. ನೋಡುವ ನೋಟ, ಕೇಳುವ ಧ್ವನಿ, ಆಡುವ ಮಾತು ಪಾವಿತ್ರ್ಯೆ ಉಳಿಸಿಕೊಳ್ಳಲು ಭಜನೆಯೊಂದೇ ದೊಡ್ಡ ಶಕ್ತಿ ಎಂದರು.

    ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಅಧ್ಯಕ್ಷೆ ಎಲ್.ಎಸ್.ಶೈಲಜಾ ಶಿವಣ್ಣ ಮಾತನಾಡಿ, ಪ್ರತಿ ಮನೆಯಲ್ಲೂ ಭಕ್ತಿಯ ವಾತಾವರಣ, ಶಾಂತಿ, ನೆಮ್ಮದಿ, ಸಂಸ್ಕೃತಿ ಮತ್ತು ಸಂಸ್ಕಾರ ಇರಬೇಕಾದರೆ ಭಜನೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

    ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯಾದ್ಯಂತ ಭಜನಾ ಪರಿಷತ್ ಮಂಡಳಿಗಳ ರಚನೆಯಾಗುತ್ತಿದೆ. ಆ ಮೂಲಕ ಸತ್ಸಂಗದ ವಾತಾವರಣ ನಿರ್ವಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

    ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts