ಚಾಮರಾಜನಗರ: ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಚಿರತೆಗಳೆರಡು ರಸ್ತೆ ಮಧ್ಯೆಯೇ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಚಿರತೆಗಳು ಮಿಲನ ನಡೆಸುತ್ತಿರುವುದನ್ನು ನೋಡಿ ಮುಂದೆ ಸಾಗಾಲು ಪರದಾಟ ನಡೆಸಿದ್ದಾನೆ. ಬಳಿಕ ತನ್ನ ಮೊಬೈಲ್ನಲ್ಲಿ ಚಿರತೆಗಳ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚಿರತೆಳೆರಡರ ಅಪರೂಪದ ದೃಶ್ಯಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಚಿರತೆಗಳೆರಡು ರಸ್ತೆ ಮಧ್ಯೆಯೇ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. #Chamarajanagara #Amachavadi #Leopard #BandipurForest #ViralVideo pic.twitter.com/uzaCAhTh3l
— Vijayavani (@VVani4U) January 2, 2020