More

    ಸಾರ್ವಜನಿಕರೆ ಗಮನಿಸಿ, ನಗರದಲ್ಲಿ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆಯಾಗಿದೆ

    ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.28ರಂದು ಬೆಳಗಾವಿಯ ಮಾಲಿನಿಸಿಟಿ ಮೈದಾನದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಏ. ಏ. 28ರಂದು ಬೆಳಗ್ಗೆಯಿಂದ ಮಧ್ಯಾಹ್ನ ವರಗೆ ನಗರದಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.  ಏ.28ರಂದು ಹೊನಗಾ ದಿಂದ ಸುವರ್ಣ ವಿಧಾನಸೌಧ ವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಬಾಗಲಕೋಟೆ ರಸ್ತೆಗಳ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರದಲ್ಲಿ ತೊಡಕುಂಟಾಗುವ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸಿಕೊಳ್ಳುವುದು. ಕೊಲ್ಹಾಪುರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ಎಲ್ಲ ವಾಹನಗಳು ಸಂಕೇಶ್ವರದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳುವುದು. ಎಂ.ಕೆ. ಹುಬ್ಬಳ್ಳಿ, ಧಾರವಾಡ ಕಡೆಗಳಿಂದ ಬೆಳಗಾವಿ ನಗರ ಮೂಲಕ ಸಂಚರಿಸುವ ವಾಹನಗಳು, ನೇಗಿನಹಾಳ, ನೇಸರಗಿ/ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು. ನಿಪ್ಪಾಣಿ, ಕೊಲ್ಹಾಪುರ, ಯಮಕನಮರಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ರಾಮ ಡಾಭಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸುವುದು. ಬಾಗಲಕೋಟೆ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ ಮಾರ್ಗವಾಗಿ ಸಂಚರಿಸುವುದು. ಬಾಗಲಕೋಟೆ, ರಾಯಚೂರು, ಯರಗಟ್ಟಿ ಮಾರ್ಗಗಳಲ್ಲಿ ಸಂಚರಿಸುವ ವಾ.ಕ.ರ.ಸಾ.ಸಂಸ್ಥೆಯ ಬಸ್‌ಗಳು ಕನಕದಾಸ ಸರ್ಕಲ್, ಕಣಬರಗಿ, ಖನಗಾಂವ ಸುಳೇಬಾವಿ, ಮಾರಿಹಾಳ ಪೊಲೀಸ್ ಠಾಣಾ ಕ್ರಾಸ್ ಮೂಲಕ ಬಾಗಲಕೋಟೆ ರಸ್ತೆಗೆ ಸಂಚರಿಸುವುದು. ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳುವುದು. ಏ.28ರಂದು ಬೆಳಗ್ಗೆ ಮದ್ಯಾಹ್ನದವರೆಗೆ ಎಲ್ಲ ಭಾರಿ ಹಾಗೂ ಮಧ್ಯಮ ಗಾತ್ರದ ವಾಹನಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.
    ಕಾರ್ಯಕ್ರಮಕ್ಕೆ ಬರುವ ವಾಹನಗಳ ನಿಲುಗಡೆ ಸ್ಥಳಗಳು:
    ಪಾರ್ಕಿಂಗ್-1: ಜ್ಯೋತಿ ನಗರ, ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲಾ ಹತ್ತಿರ ಬೆಳಗಾವಿ ನಗರದಿಂದ ಬರುವ ವಾಹನಗಳು
    ಪಾರ್ಕಿಂಗ್-2 ಹಲಗಾ-ಮಚ್ಛೆ ಬೈಪಾಸ್ ರಸ್ತೆ: ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ಸಂಕೇಶ್ವರ, ಹುಕ್ಕೇರಿ ಭಾಗಗಳಿಂದ ಬರುವ ವಾಹನಗಳು.
    ಪಾರ್ಕಿಂಗ್-3 ಅಲಾರವಾಡ ಸರ್ವಿಸ್ ರಸ್ತೆಯ ಪಶ್ಚಿಮ ಬದಿ: ಬೈಲಹೊಂಗಲ, ಬಾಗೇವಾಡಿ, ರಾಮದುರ್ಗ, ಸೌಂದತ್ತಿ ಭಾಗಗಳಿಂದ ಬರುವ ವಾಹನಗಳು.
    ಪಾರ್ಕಿಂಗ್-4 ಅಲಾರವಾಡ ಸರ್ವಿಸ್ ರಸ್ತೆಯ ಪೂರ್ವ ಬದಿ: ಗೋಕಾಕ, ಅರಭಾಂವಿ, ಘಟಪ್ರಭಾ ಭಾಗಗಳಿಂದ ಬರುವ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts