ಬೆಂಗಳೂರು: ಕರ್ನಾಟಕದ ಯುವ ಅಥ್ಲೀಟ್ ಶ್ರೀಯಾ ರಾಜೇಶ್ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ 20 ವಯೋಮಿತಿಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮೂರನೇ ದಿನವಾದ ಶುಕ್ರವಾರ ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅವರು 59.20 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಈ ಸಾಧನೆ ಮಾಡಿದರು.
ಕೂಟದ 2ನೇ ದಿನ ಮತ್ತೋರ್ವ ಕನ್ನಡತಿ ಪಾವನಾ ನಾಗರಾಜ್ ಮಹಿಳೆಯರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಕರ್ನಾಟಕದ ಮತ್ತೋರ್ವ ಅಥ್ಲೀಟ್ ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್ನಲ್ಲಿ ಫೈನಲ್ ಪ್ರವೇಶಿಸಿ ಪದಕದ ನಿರೀಕ್ಷೆಯಲ್ಲಿದ್ದಾರೆ.
ಲಕ್ಷಿತಾಗೆ ರಜತ: ಭಾರತದ ಲಕ್ಷಿತಾ ವಿನೋದ್ ಸ್ಯಾಂಡಿಲ್ಯಾ ಕೂಟದ 3ನೇ ದಿನ ನಡೆದ ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅವರು 2 ನಿಮಿಷ, 7.10 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ದ್ವೀತಿಯ ಸ್ಥಾನ ಸಂಪಾದಿಸಿದರು.
ವಿಶ್ವದ ಅತಿವೇಗದ ಓಟಗಾರ ಉಸೇನ್ ಬೋಲ್ಟ್ ಟಿ20 ವಿಶ್ವಕಪ್ಗೆ ಪ್ರಚಾರ ರಾಯಭಾರಿ