More

    ಹಗರಿಬೊಮ್ಮನಹಳ್ಳಿ ಮಾದರಿ ಕ್ಷೇತ್ರವಾಗಿಸಲು ನೀಲನಕ್ಷೆ

    ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ವಿವಿಧ ಕ್ಷೇತ್ರದ ತಜ್ಞರೊಂದಿಗೆ ಚರ್ಚಿಸಿ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.

    ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಾನು ಜೆಡಿಎಸ್ ಶಾಸಕ ಆದ್ದರಿಂದ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯವೆಂದು ಹೇಳುವವರಿಗೆ ಪ್ರಗತಿ ಸಾಧಿಸಿ ತೋರಿಸುವೆ ಎಂದರು.

    ಇದನ್ನೂ ಓದಿ: ಹಾನಗಲ್ಲನಲ್ಲಿ ದುಸ್ಥಿತಿಗೆ ತಲುಪಿದ ಶಾಸಕರ ಮಾದರಿ ಶಾಲೆ, ಗಮನಹರಿಸಬೇಕಿದೆ ಶ್ರೀನಿವಾಸ ಮಾನೆ

    ಶಾಸಕನಾಗಿ ನನಗೂ ಅನುಭವವಿದೆ. ಕ್ಷೇತ್ರದ ಅಭವೃದ್ಧಿಗೆ ಸರ್ಕಾರದಿಂದ ಹೇಗೆ ಅನುದಾನ ಬಿಡುಗಡೆ ಮಾಡಿಸಬೇಕೆಂಬ ತಿಳಿವಳಿಕೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನಗೆ ಕ್ಷೇತ್ರದಲ್ಲಿ ಯುವಕರ ಬೆಂಬಲ ಹೆಚ್ಚಿದೆ.

    ಅವರ ಮಾರ್ಗದರ್ಶನ, ಸಲಹೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವೆ. ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದೊಂದಿಗೆ ಹೋರಾಡಿ ಅನುದಾನ ಬಿಡುಗಡೆ ಮಾಡಿಸುವೆ ಎಂದರು.

    ಮಾಲ್ವಿ ಜಲಾಶಯದ ಗೇಟ್‌ನಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗೇಟ್‌ನಲ್ಲಿ ನೀರು ವ್ಯರ್ಥವಾಗುವುದನ್ನು ನಿಲ್ಲಿಸಲಾಗುವುದು ಎಂದರು.

    ಪಪಂ ಮಾಜಿ ಅಧ್ಯಕ್ಷ ಕೆ. ಕೊಟ್ರೇಶ, ಮಾಜಿ ಉಪಾಧ್ಯಕ್ಷ ಗುರುಬಸವರಾಜ್, ಸದಸ್ಯ ನಾಗರಾಜ್, ಸಂಪನ್ನ ಬಸವರಾಜ್, ಚಿಕ್ಕಿರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts