More

    ಶ್ರದ್ಧಾ, ಭಕ್ತಿಯಿಂದ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನದ ಕಳಸಾರೋಹಣ

    ರಾಣೆಬೆನ್ನೂರ: ಮನುಷ್ಯ ಜೀವನದಲ್ಲಿ ಪುಣ್ಯದ ಕೆಲಸ ಮಾಡಬೇಕು. ನಮ್ಮ ಆಚಾರ್ಯ, ವಿಚಾರ, ಸಂಸ್ಕೃತಿ ಪರಂಪರೆ ಉಳಿಸುವ ಜತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಲಿಂಗನಾಯಕನಹಳ್ಳಿ ಚನ್ನವೀರ ಶಿವಯೋಗಿ ಸ್ವಾಮೀಜಿ ಹೇಳಿದರು.
    ಇಲ್ಲಿಯ ಮಾರುತಿ ನಗರದ ಶ್ರೀ ತುಂಗಾಜಲ ಚೌಡೇಶ್ವರಿದೇವಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಕೆಲವರು ಖರ್ಚಿ ಪಡೆಯಲು ಹಣ ಹಂಚುತ್ತಾರೆ. ಮನುಷ್ಯನಿಗೆ ನಿಜವಾಗಿ ಬೇಕಾಗಿರುವುದು ಖುರ್ಚಿಯಲ್ಲ. ಶಾಂತಿ, ನೆಮ್ಮದಿಯ ಜೀವನ. ಅದು ದೊರೆಯುವುದು ದೇವಸ್ಥಾನ, ಮಠ ಮಂದಿರಗಳಿಂದ. ಆದ್ದರಿಂದ ಪ್ರತಿಯೊಬ್ಬರೂ ದೇವಸ್ಥಾನ ಕಟ್ಟಿ ಬೆಳೆಸಬೇಕು. ಆಧ್ಯಾತ್ಮದ ಚಿಂತನೆಗೆ ಒಳಗಾಗಬೇಕು. ದುಡಿದ ಹಣದಲ್ಲಿ ಕೊಂಚವಾದರೂ ಒಳ್ಳೆಯ ಕಾರ್ಯಗಳಿಗೆ ದಾನ ಮಾಡಬೇಕು ಎಂದರು.
    ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಮಾತನಾಡಿ, ಭಗವಂತನನ್ನು ತಂದೆ-ತಾಯಿಗಳ ರೂಪದಲ್ಲಿ ಪೂಜೆಸುವುದು ಇದೆ. ಭಗವಂತ ತಾಯಿ ಎಂದು ತಿಳಿದುಕೊಂಡರೆ ಅದೇ ಆ ಮನುಷ್ಯನನ್ನು ಎತ್ತರಕ್ಕೆ ಬೆಳೆಸಿ ನೆಮ್ಮದಿಯ ಜೀವನ ಕರುಣಿಸುತ್ತದೆ ಎಂದರು.
    ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ತುಂಗಾಜಲ ಚೌಡೇಶ್ವರಿ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಧರ್ಮಸಭೆಗೂ ಮುನ್ನ ದೇವಸ್ಥಾನದ ಕಳಸಾರೋಹಣ, ಹೋಮ-ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts