More

    ಗುರುವಿಗಿದೆ ಬದುಕಿಗೆ ದಾರಿ ತೋರುವ ಶಕ್ತಿ

    ತೆಲಸಂಗ, ಬೆಳಗಾವಿ: ಸಮಾಜದಲ್ಲಿ ಅಕ್ಷರ ಸಂಸ್ಕೃತಿಯಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಶಿಷ್ಯಂದಿರು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವ ಶಕ್ತಿ ಶಿಕ್ಷಕರಿಗಿದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

    ಗ್ರಾಮದ ಸಿದ್ಧರಾಮೇಶ್ವರ ಮಠದಲ್ಲಿ ಶನಿವಾರ ಏರ್ಪಡಿಸಿದ್ದ 1992ನೇ ಬ್ಯಾಚ್‌ನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಶಿಕ್ಷಕ ಎನ್ನುವುದು ಶ್ರೇಷ್ಠ ಪದವಾಗಿದೆ. ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಜ್ಞಾನದಾಹ ಗುರುವಿಗೆ ಅರ್ಥವಾಗಬೇಕು. ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರಬೇಕು. ವಿದ್ಯಾರ್ಥಿಯನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ಗುರುವಿಗಿದೆ ಎಂದರು.

    ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಂಗಮೇಶ ಹಚಡದ ಮಾತನಾಡಿ, ಶಿಕ್ಷಕ ಪದವಿಯ ಗೌರವ ಬೋಧಿಸಿದ ಮೌಲ್ಯಗಳು ಮತ್ತು ಪ್ರಾಮಾಣಿಕ ಪರಿಶ್ರಮದಲ್ಲಿ ಅಡಗಿದೆ ಎಂದರು. ನಿವೃತ್ತ ಪ್ರಾಚಾರ್ಯ ಜಿ.ಎಂ.ಬೈರೋಡಗಿ, ಬಿ.ಎನ್.ಅವಟಿ, ಕೆ.ಎನ್.ಬಿರಾದರ, ಎ.ಎಂ.ಅತ್ತಾರ, ಎಂ.ಡಿ.ಗಲಗಲಿ, ಐ.ಎನ್. ಇಂಚಗೇರಿ, ಎಸ್.ಜಿ.ದೊಡಮನಿ ಮಾತನಾಡಿದರು. ಮಲ್ಲಿಕಾರ್ಜುನ ಹತ್ತಿ,
    ಡಾ. ಆರ್.ಡಿ.ಪೂಜಾರಿ, ಬಿ.ಎಚ್. ಶೆಲ್ಲೆಪ್ಪಗೋಳ, ಬದ್ರುದ್ದೀನ್ ಡೊಂಗರಗಾಂವ, ಶಿವಬಸು ಕುಂಬಾರ, ಶಿವಯೋಗಿ ಹತ್ತಿ, ಯಲ್ಲಪ್ಪ ಕೋಡ್ನಿ, ಬಸು ಅವಟಿ, ನಾರಾಯಣ ಬಡಿಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts