ಲಂಡನ್: ದೇಹದ ಆಕಾರ ಪಡೆಯಲು ಅತಿಯಾದ ಡಯಟ್ ಮಾಡಲು ಹೋದ ಬಿಗ್ಬಾಸ್ ಮಾಜಿ ಸ್ಪರ್ಧಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅತಿಯಾದ ಉಪವಾಸ ಮಾಡಲು ಹೋಗಿ ದೇಹದಲ್ಲಿದ್ದ ಉಪ್ಪಿನಂಶ ತೀವ್ರ ಕಡಿಮೆಯಾಗಿದ್ದು, ಅವರನ್ನು ಲಂಡನ್ನಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ಬ್ರಿಟನ್ನಲ್ಲಿ ನೆಲೆಸಿರುವ ಹಯಾತ್ ಅವರಿಗೆ ಐದು ಪಾಕೆಟ್ ಉಪ್ಪನ್ನು ನೀಡಲಾಯಿತಂತೆ. ನಂತರ ಚೇತರಿಸಿಕೊಂಡ ಅವರನ್ನು ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗೆ ಆಧ್ಯಾತ್ಮಿಕತೆಯತ್ತ ಒಲವು ಮೂಡಿಸಿಕೊಂಡಿದ್ದ ಹಯಾತ್, ಇದರ ಜತೆಗೆ ದೇಹ ಸೌಂದರ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅತಿಯಾದ ಉಪವಾಸ ಮಾಡಿದ್ದೇ ಈ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಫಿಯಾ, ನಾನು ಉಪವಾಸದಿಂದ ದೇಶ ಶುದ್ಧೀಕರಿಸುವ ಅಭ್ಯಾಸವನ್ನು ಮಾಡುತ್ತಿದ್ದೆ, ಇದು ಅತಿಯಾಗಿ ದೇಹ ಸ್ಥಿತಿ ಅಪಾಯಮಟ್ಟಕ್ಕೆ ತಲುಪಿತ್ತು, ಈ ವೇಳೆ ವೈದ್ಯರು ನನ್ನನ್ನು ಕಾಪಾಡಿದ್ದಾರೆ ಎಂದು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
2016ರಲ್ಲಿ ಪ್ರಸಾರವಾದ ಹಿಂದಿ ಭಾಷೆಯ ಬಿಗ್ಬಾಸ್ 7ನೇ ಆವೃತ್ತಿಯಲ್ಲಿ ಸೋಫಿಯಾ ಹಯಾತ್ ಭಾಗವಹಿಸಿದ್ದರು. (ಏಜೆನ್ಸೀಸ್)
20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಪಿಡಿಒ: ಜಮೀನು ಪಹಣಿಗಾಗಿ ಲಂಚ ಕೇಳಿದ್ದ ಅಧಿಕಾರಿ ವಿರುದ್ಧ ರೈತನಿಂದ ದೂರು
ಬಿಸಿಯೂಟದ ತೊಗರಿಬೇಳೆ ಮಾರಾಟ ಮಾಡಿದ್ದ ವಿಡಿಯೋ ವೈರಲ್: ಮುಖ್ಯ ಶಿಕ್ಷಕನ ಅಮಾನತು