More

    ದೇಶದ ಶೇ. 95 ಮಂದಿಗೆ ಪೆಟ್ರೋಲ್ ಅಗತ್ಯವೇ ಇಲ್ಲ!; ಹೀಗಂದಿದ್ದು ಯಾರು ಗೊತ್ತೇ?

    ಉತ್ತರಪ್ರದೇಶ: ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು ಆ ಸಂಬಂಧ ವಿರೋಧ ಹಾಗೂ ಒಂದಷ್ಟು ಸಮರ್ಥನೆ ಹೊರ ಹೊಮ್ಮುತ್ತಲೂ ಇದೆ. ಇದೀಗ ಸಚಿವರೊಬ್ಬರು ಪೆಟ್ರೋಲ್​ ಬೆಲೆ ಏರಿಕೆಯನ್ನು ಮತ್ತೊಂದು ರೀತಿಯಲ್ಲಿ ಸಮರ್ಥನೆಗೆ ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ಪ್ರಕಾರ, ದೇಶದ ಶೇ. 95 ಮಂದಿಗೆ ಪೆಟ್ರೋಲ್​ ಅಗತ್ಯವೇ ಇಲ್ಲವಂತೆ!

    ದೇಶದಲ್ಲಿ ಕೆಲವೇ ಮಂದಿ ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಿದ್ದಾರೆ, ಅವರಿಗಷ್ಟೇ ಪೆಟ್ರೋಲ್ ಅಗತ್ಯವಿದೆ. ಉಳಿದಂತೆ ಶೇ. 95 ಮಂದಿಗೆ ಪೆಟ್ರೋಲ್​ ಅಗತ್ಯವೇ ಇಲ್ಲ ಎಂಬುದಾಗಿ ಈ ಸಚಿವರು ಹೇಳಿದ್ದಾರೆ. ದೇಶದಲ್ಲಿ ಶತಕೋಟಿಗೂ ಅಧಿಕ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಪೆಟ್ರೋಲ್​ ಬೆಲೆಯನ್ನು ತಲಾ ಆದಾಯಕ್ಕೆ ಹೋಲಿಸಿದರೆ ಆ ಬೆಲೆ ಕಡಿಮೆಯೇ ಎಂದೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​

    ಅಂದಹಾಗೆ ಈ ರೀತಿಯಲ್ಲಿ ಪೆಟ್ರೋಲ್ ಬೆಲೆಯನ್ನು ಸಮರ್ಥನೆ ಮಾಡಿಕೊಂಡಿರುವುದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ. ಮತ್ತೊಂದೆಡೆ ಗುರುವಾರವೂ ದೇಶದಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು, ಒಂದೇ ಸಲಕ್ಕೆ ಲೀಟರ್​ಗೆ 45 ಪೈಸೆ ಏರಿದೆ. (ಏಜೆನ್ಸೀಸ್)

    ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts