More

    ಗಜೇಂದ್ರಗಡ ತಾಪಂ ‘ಕೈ’ ವಶ

    ಗಜೇಂದ್ರಗಡ: ನೂತನ ತಾಲೂಕು ಪಂಚಾಯಿತಿಯ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಅಧ್ಯಕ್ಷೆಯಾಗಿ ಜಯಶ್ರೀ ಅಶೋಕ ಪಾಟೀಲ, ಉಪಾಧ್ಯಕ್ಷರಾಗಿ ಶಶಿಧರ ಶರಣಪ್ಪ ಹೂಗಾರ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

    ರೋಣ ತಾಲೂಕನ್ನು ವಿಭಜನೆ ಮಾಡಿ ಗಜೇಂದ್ರಗಡವನ್ನು ನೂತನ ತಾಲೂಕಾಗಿ ರಚನೆ ಮಾಡಿದ ನಂತರ ಮೊದಲ ಬಾರಿಗೆ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ತಾಪಂನ ಒಟ್ಟು 6 ಸದಸ್ಯರಲ್ಲಿ ನಾಲ್ವರು ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಬಿಜೆಪಿ ಸದಸ್ಯರು ಗೈರಾಗಿದ್ದರಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಅವಿರೋಧ ಆಯ್ಕೆ ನಡೆಯಿತು.

    ಉಪಾಧ್ಯಕ್ಷ ಶಶಿಧರ ಹೂಗಾರ ಮಾತನಾಡಿ, ‘ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶ್ರಮಿಸುತ್ತೇವೆ’ ಎಂದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಾಪಂ ಇಒ ಸಂತೋಷ ಪಾಟೀಲ, ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್, ಎಚ್.ಎಸ್. ಸೋಂಪೂರ, ಅರ್ಜುನ ರಾಠೋಡ, ಬಸವರಾಜ ಶೀಲವಂತರ, ಮುರ್ತಜಾ ಡಾಲಾಯತ, ರಾಜು ಸಾಂಗ್ಲಿಕರ, ಬಸವರಾಜ ಚನ್ನಿ, ಅಶೋಕ ಪಾಟೀಲ, ಈರಪ್ಪ ಬಿಚ್ಚೂರ, ಅಂದಾನಗೌಡ ಪಾಟೀಲ, ಯಲ್ಲಪ್ಪ ಬಂಕದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts