More

    ಕ್ರಿಸ್ಮಸ್​ಗೆ ’83’, ‘ಸೂರ್ಯವಂಶಿ’ ಮುಂದಿನ ವರ್ಷ ಬಿಡುಗಡೆ

    ಮುಂಬೈ: ‘ಸೂರ್ಯವಂಶಿ’ ಮತ್ತು ’83’ ಚಿತ್ರಗಳ ಬಿಡುಗಡೆ ಯಾವಾಗ?

    ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಹಲವು ದಿನಗಳಿಂದ ಕಾಡುತ್ತಲೇ ಇದಕ್ಕೆ. ಅದಕ್ಕೆ ಕಾರಣ, ಈ ಎರಡೂ ಚಿತ್ರಗಳನ್ನು ವರ್ಷಾಂತ್ಯಕ್ಕೆ ಬಿಡಗುಡೆ ಮಾಡುವುದಕ್ಕೆ ಎರಡು ಚಿತ್ರಗಳನ್ನು ನಿರ್ಮಿಸಿರುವ ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಸಂಸ್ಥೆ ನಿರ್ಧರಿಸಿತ್ತು. ಆದರೆ, ಈ ಯೋಚನೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದ್ದು, ’83’ ಚಿತ್ರವು ಕ್ರಿಸ್ಮಸ್​ಗೆ ಬಿಡುಗಡೆಯಾದರೆ, ‘ಸೂರ್ಯವಂಶಿ’ ಚಿತ್ರವು ಮುಂದಿನ ವರ್ಷ ಬಿಡುಗಡೆ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ಸುಮ್ಮನೆ ಸುಳ್ಳು ಹೇಳಬೇಡಿ: ಸಿಬಿಐ ಎಚ್ಚರಿಕೆ

    ಬೇರೆಲ್ಲಾ ದೊಡ್ಡ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದರೆ, ಇತ್ತ ಅಕ್ಷಯ್​ ಕುಮಾರ್​ ಅಭಿನಯದ ‘ಸೂರ್ಯವಂಶಿ’ ಮತ್ತು ರಣವೀರ್​ ಸಿಂಗ್​ ಅಭಿನಯದ ’83’ ಚಿತ್ರಗಳನ್ನು ನಿರ್ಮಿಸಿದ್ದ ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಸಂಸ್ಥೆ ಮಾತ್ರ, ಯಾವುದೇ ಕಾರಣಕ್ಕೂ ಆ ಎರಡೂ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

    ಅದರಂತೆ, ದೀಪಾವಳಿ ಹೊತ್ತಿಗೆ ‘ಸೂರ್ಯವಂಶಿ’ ಮತ್ತು ಕ್ರಿಸ್ಮಸ್​ ಸಮಯದಲ್ಲಿ ’83’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಕ್ರಿಸ್ಮಸ್​ಗೆ ’83’ ಚಿತ್ರ ಬಿಡುಗಡೆ ಆಗುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ‘ಸೂರ್ಯವಂಶಿ’ ಚಿತ್ರವನ್ನು ಮಾತ್ರ ಮುಂದಿನ ವರ್ಷ ಬಿಡುಗಡೆ ಮಾಡುವುದಕ್ಕೆ ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಸಂಸ್ಥೆಯು ನಿರ್ಧರಿಸಿದೆ.

    ಇದನ್ನೂ ಓದಿ: ಚಿರು ಹುಟ್ಟುಹಬ್ಬಕ್ಕೆ ‘ಕ್ಷತ್ರಿಯ’ ಚಿತ್ರದ ಟೀಸರ್ ಬಿಡುಗಡೆ

    ಈ ಪೈಕಿ ’83’ ಚಿತ್ರವು, 1983ರಲ್ಲಿ ಭಾರತ ಕ್ರಿಕೆಟ್​ ತಂಡವು ವಿಶ್ವಕಪ್​​ ಗೆದ್ದ ಕಥಾನಕ ಹೊಂದಿದ್ದು, ಚಿತ್ರದಲ್ಲಿ ರಣವೀರ್​ ಸಿಂಗ್​ ಅವರು ಕಪಿಲ್​ ದೇವ್​ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ದೀಪಿಕಾ ಪಡುಕೋಣೆ, ಜೀವ, ಪಂಕಜ್​ ತ್ರಿಪಾಠಿ, ಬೋಮನ್​ ಇರಾನಿ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದಾರೆ.

    ಏಕಕಾಲದಲ್ಲಿ ಎರಡು ರಿಮೇಕ್​ ಸಿನಿಮಾ ಶೂಟಿಂಗ್​ನಲ್ಲಿ ಮೆಗಾಸ್ಟಾರ್ ಚಿರಂಜೀವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts