More

    ಸವಣೂರಲ್ಲಿ 774 ವಿದ್ಯಾರ್ಥಿಗಳು ಹಾಜರು

    ಸವಣೂರ: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಪ್ರಸಕ್ತ ಸಾಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಬುಧವಾರ ನಡೆಯಿತು.

    ಸವಣೂರ ಸರ್ಕಾರಿ ಮಜೀದ ಪದವಿ ಪೂರ್ವ ಕಾಲೇಜ್, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ನಡೆದ ಪರೀಕ್ಷೆಗೆ 791 ಅರ್ಜಿ ಸಲ್ಲಿಸಿದ್ದರು. 774 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 17 ವಿದ್ಯಾರ್ಥಿಗಳು ಗೈರಾಗಿರಿದ್ದರು. ಪ್ರಶ್ನೆ ಪಾಲಕರಾಗಿ ಎಂ. ಆಂಜನೇಯ, ಉಪ ಮುಖ್ಯ ಅಧೀಕ್ಷಕರಾಗಿ ಆನಂದ ಬೆಲ್ಲದ, ಎಸ್.ಟಿ. ಮುದಿಗೌಡ್ರ, 69 ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

    66 ಅಭ್ಯರ್ಥಿಗಳು ಗೈರು: ಹಾನಗಲ್ಲ ಪಟ್ಟಣದ 5 ಕಡೆಗಳಲ್ಲಿ ಸ್ಥಾಪಿಸಿದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ 240, ಎನ್​ಸಿಜೆಸಿ ಕಾಲೇಜಿನಲ್ಲಿ 312, ಎನ್​ಸಿಜೆಸಿ ಪ್ರೌಢಶಾಲಾ ವಿಭಾಗದಲ್ಲಿ 216, ಕೆಎಲ್​ಇ ಪದವಿಪೂರ್ವ ಕಾಲೇಜ್​ನಲ್ಲಿ 288, ಅಂಜುಮನ್ ಪದವಿಪೂರ್ವ ಕಾಲೇಜ್​ನಲ್ಲಿ 432, ರೋಶನಿ ಪ್ರೌಢಶಾಲೆಯಲ್ಲಿ 240 ಸೇರಿದಂತೆ ಒಟ್ಟು 1720 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ, 66 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 1662 ವಿದ್ಯಾರ್ಥಿಗಳು ಪ್ರವೇಶ ಬಯಸಿ ಪರೀಕ್ಷೆ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts