More

    ಸೂರ್ಯ-ಚಂದ್ರ ಇರುವ ತನಕ ಅಂಬೇಡ್ಕರ್ ಜೀವಂತ

    ಮದ್ದೂರು: ಎಲ್ಲ ಧರ್ಮಗಳಿಗಿಂತ ಸಂವಿಧಾನ ಶ್ರೇಷ್ಠ ಗ್ರಂಥವಾಗಿದೆ. ವಿಶ್ವವೇ ಮೆಚ್ಚುವ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸೂರ್ಯ-ಚಂದ್ರ ಇರುವ ತನಕ ಜೀವಂತವಾಗಿರುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ 75ನೇ ವರ್ಷದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವೇ ಮೆಚ್ಚುವ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಆ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯವಾಗಿ ಬದುಕುವ ಹಕ್ಕು ಸೇರಿದಂತೆ ಇನ್ನಿತರ ಮೂಲ ಹಕ್ಕುಗಳನ್ನು ಒದಗಿಸಿದ್ದಾರೆ. ದೇಶದ ಪ್ರಗತಿಗಾಗಿ ದುಡಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕೆ.ಬಿ.ಚಿಕ್ಕಣ್ಣ, ಡಿ.ಸಿ.ಮಹೇಂದ್ರ, ಹೆಮ್ಮನಹಳ್ಳಿ ಜಯಶಂಕರ, ಚಂದ್ರು, ಮರಿದೇವರು, ಚೆನ್ನಪ್ಪ, ಎಂ.ಬಸವರಾಜು, ಎಂ.ಟಿ.ಚಂದ್ರಶೇಖರ್, ಮೇರಿಅನಿತಾ, ವಂದನಾ, ಕುಚೇಲ, ಸಿ.ನಾಗಲಕ್ಷ್ಮೀ ಅಜಾಮ್‌ಖಾನ್ ಅವರನ್ನು ಸನ್ಮಾನಿಸಲಾಯಿತು.
    ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಸಕ ಉದಯ್ ಪ್ರೋತ್ಸಾಹ ಧನ ವಿತರಿಸಿದರು.

    ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಧ್ವಜಾರೋಹಣ ನೆರವೇರಿಸಿದರು. ಬಿಇಒ ಸಿ.ಎಚ್.ಕಾಳಿರಯ್ಯ, ತಾಪಂ ಇಒ ಎಲ್.ಸಂದೀಪ್, ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್, ಪುರಸಭಾ ಸದಸ್ಯರಾದ ಸುರೇಶ್, ಪ್ರಸನ್ನ, ಸರ್ವಮಂಗಳಾ, ಕೋಕಿಲಾಅರುಣ್, ಸುಮಿತ್ರಾ ರಮೇಶ್, ತಾಲೂಕು ಮಟ್ಟದ ಅಧಿಕಾರಿಗಳಾದ ರವೀಂದ್ರ ಬಿ.ಗೌಡ, ಡಿ.ಪರಮೇಶ್, ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts