More

    ನಮ್ಮೂರಿನ ಹಬ್ಬದಂತೆ ಆಚರಿಸಿ

    ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

    ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ವಿವಿಧ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ಭಾರತೀಯರನ್ನು ಏಕತೆಗಾಗಿ ಒಗ್ಗೂಡಿಸಿ ಸಂವಿಧಾನದ ಮೂಲಕ ಸಮಾನತೆ, ಸಹಬಾಳ್ವೆ ಕಲ್ಪಿಸಿದ ಗಣರಾಜ್ಯೋತ್ಸವವನ್ನು ನಮ್ಮೆಲ್ಲರ ಮನೆ ಹಾಗೂ ನಮ್ಮೂರಿನ ಹಬ್ಬದಂತೆ ಪ್ರತಿ ಪ್ರಜೆಯೂ ಹೆಮ್ಮೆಯಿಂದ ಆಚರಿಸಬೇಕು ಎಂದು ತಿಳಿಸಿದರು.

    ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಅಂಬೇಡ್ಕರ್ ಅವರ ಪರಿಕಲ್ಪನೆಯಂತೆ ಸಮಾನತೆ, ಸುಸ್ಥಿರ ಹಾಗೂ ಸದೃಢ ಶಿಕ್ಷಣದ ಮೂಲಕ ಆರ್ಥಿಕ, ಸಾಮಾಜಿಕ, ನ್ಯಾಯಿಕ, ರಾಜಕೀಯ ಹಾಗೂ ಅಭಿವೃದ್ಧಿಗೊಂಡ ಸುಂದರ ಭಾರತವನ್ನು ನಮ್ಮ ಮುಂದಿನ ಪೀಳೆಗೆಗೆ ನಿರ್ಮಿಸಿಕೊಡುವ ಜವಾಬ್ದಾರಿ ಇದ್ದು, ಇದನ್ನು ಸಾಕಾರಗೊಳಿಸಬೇಕು ಎಂದರು.

    ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪಥಸಂಚಲನ ನಡೆಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ತಾಪಂ ಇಒ ವೇಣು, ಡಿವೈಎಸ್ಪಿ ಎಚ್.ಎಸ್.ಮುರುಳಿ, ಮುಖ್ಯಾಧಿಕಾರಿ ರಾಜಣ್ಣ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಆದರ್ಶ ಹಾಗೂ ಪುರಸಭೆ ಹಾಗೂ ಗ್ರಾಪಂನ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts