More

    ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

    ಭಗಪತ್​: ಉತ್ತರಪ್ರದೇಶದ ಪಶ್ಚಿಮಭಾಗದಲ್ಲಿರುವ ಭಾಗಪತ್​ನಲ್ಲಿ ಚಿತಾಗಾರಗಳಿಗೆ ಮತ್ತು ಸ್ಮಶಾನಗಳಿಗೆ ಹೋಗಿ ಸತ್ತವರ ಬಟ್ಟೆ ಮತ್ತು ಹೆಣಕ್ಕೆ ಹೊದ್ದಿಸಿದ ಬೆಡ್​​ಶೀಟ್​ಗಳನ್ನು ಕದಿಯುತ್ತಿದ್ದ 7 ಜನರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಕರೊನಾದಿಂದ ಸತ್ತವರ ಹೆಣಗಳಿಗೆ ಸೂಕ್ತ ಅಂತ್ಯಕ್ರಿಯೆ ಒದಗಿಸಲು ದೇಶದ ವಿವಿಧೆಡೆ ಸಮಸ್ಯೆ ಎದ್ದಿರುವ ಸಮಯದಲ್ಲೇ ಈ ವಿಚಿತ್ರ ಕಸುಬು ಬೆಳಕಿಗೆ ಬಂದಿದೆ.

    “ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಸತ್ತವರನ್ನು ಮುಚ್ಚಲು ಬಳಸುತ್ತಿದ್ದ ಬೆಡ್​​ಶೀಟ್​ಗಳು, ಸೀರೆಗಳು ಮತ್ತು ಸತ್ತವರ ಬಟ್ಟೆಗಳನ್ನು ಕದಿಯುತ್ತಿದ್ದುದು ತಿಳಿದುಬಂದಿದೆ. ಅವರ ಬಳಿಯಿಂದ 520 ಬೆಡ್​​ಶೀಟ್​ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ವಶ ಪಡಿಸಿಕೊಳ್ಳಲಾಗಿದೆ” ಎಂದು ಸರ್ಕಲ್ ಆಫಿಸರ್ ಅಲೋಕ್​ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

    ಹೀಗೆ ಕದ್ದ ಬಟ್ಟೆಗಳನ್ನು ಚೆನ್ನಾಗಿ ಒಗೆದು ಸ್ವಚ್ಛ ಮಾಡಿ, ಇಸ್ತ್ರಿ ಮಾಡಿ ಅದನ್ನು ಗ್ವಾಲಿಯರ್​ನ ಕಂಪನಿಯೊಂದರ ಲೇಬಲ್ ಹಾಕಿ ಮಾರುತ್ತಿದ್ದರು. ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳು ಇವರಿಗೆ ನಿತ್ಯದ ಲೂಟಿಗೆ 300 ರೂ.ಗಳಂತೆ ಹಣವನ್ನೂ ನೀಡುತ್ತಿದ್ದರು ಎನ್ನಲಾಗಿದೆ.

    “ಏಳು ಬಂಧಿತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಕದಿಯುತ್ತಿದ್ದಾರೆ. ಕರೊನಾ ಸಮಯದಲ್ಲಿ ಬಂಧನಕ್ಕೊಳಗಾಗಿರುವುದರಿಂದ ಕಳವಿನ ಆರೋಪದ ಜೊತೆಗೆ ಎಪಿಡೆಮಿಕ್​ ಆ್ಯಕ್ಟ್​ನ ಅಡಿಯಲ್ಲೂ ಇವರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ಕ್ರೊಯೇಷಿಯಾದಲ್ಲಿ ವಾಸ್ತವ್ಯ ಹೂಡಲಿದೆ ಭಾರತದ ಒಲಂಪಿಕ್ ಶೂಟಿಂಗ್ ತಂಡ

    ಕರ್ಫ್ಯೂ ಇದೆ ಅಂತ ಆ್ಯಂಬುಲೆನ್ಸ್​ನಲ್ಲಿ ಪ್ರಯಾಣಿಸಿದ ಬಿಗ್​ ಬಾಸ್​ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts