More

    ಕುತೂಹಲ ಕೆರಳಿಸಿದೆ ಐಪಿಎಲ್​ ಪ್ಲೇಆಫ್​ ರೇಸ್​; 3 ಸ್ಥಾನಗಳಿಗೆ 6 ತಂಡಗಳ ಪೈಪೋಟಿ!

    ಬೆಂಗಳೂರು: ಐಪಿಎಲ್​-17ರಲ್ಲಿ ಈಗಾಗಲೆ ಲೀಗ್​ ಹಂತದ 63 ಪಂದ್ಯಗಳು ಮುಗಿದಿದ್ದು, 7 ಪಂದ್ಯಗಳಷ್ಟೇ ಬಾಕಿ ಇದೆ. ಆದರೆ ಇದುವರೆಗೆ ಕೆಕೆಆರ್​ ಒಂದೇ ಪ್ಲೇಆಫ್​ ಪ್ರವೇಶ ಖಚಿತಪಡಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್​, ಪಂಜಾಬ್​ ಕಿಂಗ್ಸ್​ ಜತೆಗೆ ಮಳೆ ಕಾಟದಿಂದಾಗಿ ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ಕೂಡ ಸೋಮವಾರ ಅಧಿಕೃತವಾಗಿ ರೇಸ್​ನಿಂದ ಹೊರಬಿದ್ದಿದೆ. ಉಳಿದ 3 ಸ್ಥಾನಗಳಿಗಾಗಿ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಕೆಟ್ಟ ರನ್​ರೇಟ್​ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೊನೇ ಪಂದ್ಯ ಗೆದ್ದರೂ ಪ್ಲೇಆಫ್​​ಗೇರುವುದು ಬಹುತೇಕ ಅಸಾಧ್ಯವೆನಿಸಿದೆ.

    ಸತತ 3 ಸೋಲಿನಿಂದ ರಾಜಸ್ಥಾನ ರಾಯಲ್ಸ್​ ಲಯ ತಪ್ಪಿದ್ದರೂ, ಈಗಾಗಲೆ 8 ಪಂದ್ಯ ಗೆದ್ದಿರುವುದರಿಂದ ಪ್ಲೇಆಫ್​​ ಪ್ರವೇಶ ಬಹುತೇಕ ಖಚಿತವೆನಿಸಿದೆ. ಸನ್​ರೈಸರ್ಸ್​ ಪ್ಲೇಆಫ್​ಗೇರುವ ಮತ್ತೊಂದು ನೆಚ್ಚಿನ ತಂಡವಾಗಿದ್ದು, ಉಳಿದ ಎರಡೂ ಪಂದ್ಯ ಸೋತರಷ್ಟೇ ಹೊರಬೀಳುವ ಅಪಾಯ ಹೊಂದಿದೆ. ಲಖನೌ ತಂಡ ಕೊನೇ 2 ಪಂದ್ಯ ಗೆದ್ದು ಪ್ಲೇಆಫ್​ಗೇರುವ ಅವಕಾಶ ಹೊಂದಿದೆ. ಆದರೆ ಇದೇ ವೇಳೆ ರನ್​ರೇಟ್​ ಭಾರಿ ಸುಧಾರಣೆ ಕಾಣದಿದ್ದರೆ ಲಖನೌ ತಂಡ ಪ್ಲೇಆಫ್​​ಗೇರಲು, ಆರ್​ಸಿಬಿ ವಿರುದ್ಧದ ಕೊನೇ ಪಂದ್ಯದಲ್ಲಿ ಸಿಎಸ್​ಕೆ ಸೋಲಲಿ ಅಥವಾ ಸನ್​ರೈಸರ್ಸ್​ ಉಳಿದೆರಡೂ ಪಂದ್ಯ ಸೋಲಲಿ ಎಂದು ಪ್ರಾರ್ಥಿಸಬೇಕಾಗುತ್ತದೆ.

    ಇನ್ನು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡ ಪ್ಲೇಆ್​ಗೇರಬೇಕಾದರೆ, ಕೊನೇ ಪಂದ್ಯದಲ್ಲಿ ಜಯಿಸುವ ಜತೆಗೆ ಸನ್​ರೈಸರ್ಸ್​ ತಂಡ ಉಳಿದ 2ರಲ್ಲಿ ಒಂದಾದರೂ ಸೋಲಲಿ ಅಥವಾ ಲಖನೌ ಉಳಿದೆರಡು ಪಂದ್ಯ ಗೆದ್ದರೂ ರನ್​ರೇಟ್​ ಸುಧಾರಿಸದಿರಲಿ ಎಂದು ಪ್ರಾರ್ಥಿಸಬೇಕಾಗಿದೆ. ಸಿಎಸ್​ಕೆ ಕೊನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಅಲ್ಪ ಅಂತರದಲ್ಲಿ ಸೋತರೂ ಪ್ಲೇಆಫ್​ ಅವಕಾಶವಿದ್ದು, ಆಗ ಸನ್​ರೈಸರ್ಸ್​ ಉಳಿದೆರಡೂ ಅಥವಾ ಲಖನೌ ಒಂದಾದರೂ ಪಂದ್ಯ ಸೋಲಬೇಕಾಗುತ್ತದೆ.

    ಉಳಿದ 7 ಲೀಗ್​ ಪಂದ್ಯಗಳು
    ಮೇ 14: ಡೆಲ್ಲಿ-ಲಖನೌ (ನವದೆಹಲಿ)
    ಮೇ 15: ರಾಜಸ್ಥಾನ-ಪಂಜಾಬ್​ (ಗುವಾಹಟಿ)
    ಮೇ 16: ಸನ್​ರೈಸರ್ಸ್​-ಗುಜರಾತ್​ (ಹೈದರಾಬಾದ್​)
    ಮೇ 17: ಮುಂಬೈ-ಲಖನೌ (ಮುಂಬೈ)
    ಮೇ 18: ಆರ್​ಸಿಬಿ-ಸಿಎಸ್​ಕೆ (ಬೆಂಗಳೂರು)
    ಮೇ 19: ಸನ್​ರೈಸರ್ಸ್​-ಪಂಜಾಬ್​ (ಹೈದರಾಬಾದ್​)
    ಮೇ 19: ರಾಜಸ್ಥಾನ-ಕೆಕೆಆರ್​ (ಗುವಾಹಟಿ).

    ಆರ್​ಸಿಬಿ ವಿರುದ್ಧ ಡೆಲ್ಲಿ ತಂಡದ ಸೋಲಿಗೆ ಕಾರಣ ವಿವರಿಸಿದ ಹಂಗಾಮಿ ನಾಯಕ ಅಕ್ಷರ್​ ಪಟೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts